ಪಿಲಿಗೂಡು: ಪಿಲಿಗೂಡು ಮಾವಿನಕಟ್ಟೆ ಸಮೀಪದ ಯಾಂತ್ರಡ್ಕ ಉಸ್ಮಾನ್ ಎಂಬವರ ಮನೆಯೊಳಗೆ ಕಳ್ಳರು ಪ್ರವೇಶಿಸಿ ನಗ ಹಾಗೂ ನಗದು ಎಗರಿಸಿದ ಘಟನೆ ಎ.10 ರಂದು ನಡೆದಿದೆ.

ಮಾವಿನಕಟ್ಟೆ ಸಮೀಪದ ಯಾಂತ್ರಡ್ಕ ಉಪ್ಪಿನಂಗಡಿ – ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಉಸ್ಮಾನ್ ಎಂಬವರ ಮನೆಯೊಳಗೆ ಹೊಕ್ಕ ಕಳ್ಳರು ಸುಮಾರು 58 ಸಾವಿರ ರೂಪಾಯಿ ಹಾಗೂ 2 ಪವನ್ ಚಿನ್ನವನ್ನು ಕಪಾಟು ಹೊಡೆದು ದೋಚಿ ಪರಾರಿಯಾಗಿದ್ದಾರೆ. ಉಸ್ಮಾನ್ ಹಾಗೂ ಮನೆಯವರು ಬೆಳ್ಳಗ್ಗೆ 10:30 ಗಂಟೆ ವೇಳೆಗೆ ಮದುವೆ ಕಾರ್ಯಕ್ರಮ ಹೋಗಿದ್ದು ಸಂಜೆ 3: 30 ಗಂಟೆ ವೇಳೆ ಬರುವಾಗ ಈ ಘಟನೆ ನಡೆದಿದೆ.

ಬಡ ವರ್ಗದ ಕುಟುಂಬ ಉಸ್ಮಾನ್ ಅವರದ್ದಾಗಿದ್ದು ಸಾಲಕ್ಕೆ ಪಡೆದುಕೊಂಡಿರುವ ಮೊತ್ತವನ್ನು ಹಿಂತಿರುಗಿಸಲು ಕಪಾಟಿನಲ್ಲಿ ಇಟ್ಟಿದ್ದರು. ಆದರೆ ಖದೀಮರು ಅದನ್ನೇ ಎಗರಿಸಿ ಮನೆಯ ಹಿಂಬದಿ ಬಾಗಿಲಿನಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಐಪಿಎಸ್ ಅಧಿಕಾರಿ ಮನೀಷಾ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
