April 14, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧರ್ಮಸ್ಥಳ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಹಾವೀರ ಜನ್ಮ ಕಲ್ಯಾಣೋತ್ಸವ

ಧರ್ಮಸ್ಥಳ : ಮಹಾವೀರ ಜಯಂತಿಯ ಪ್ರಯುಕ್ತ, ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳದ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಹಾವೀರ ಜನ್ಮ ಕಲ್ಯಾಣೋತ್ಸವವು ಶ್ರದ್ಧಾಭಕ್ತಿಯಿಂದ ಎ.10ರಂದು ನೆರವೇರಿತು.

ಭವ್ಯ ಮೆರವಣಿಗೆಯೊಂದಿಗೆ ಆರಂಭಗೊಂಡ ಈ ಧಾರ್ಮಿಕ ಕಾರ್ಯಕ್ರಮದಲ್ಲಿ, ತೀರ್ಥಂಕರರಿಗೆ ವಿಶೇಷ ಅಭಿಷೇಕ ಮತ್ತು ಅಷ್ಟವಿಧಾರ್ಚನೆ ಪೂಜೆಗಳನ್ನು ಸಲ್ಲಿಸಲಾಯಿತು. ಬಳಿಕ, ಬಾಲ ತೀರ್ಥಂಕರನಿಗೆ ವೈಭವಯುತವಾದ ನಾಮಕರಣೋತ್ಸವವನ್ನು ಆಚರಿಸಲಾಯಿತು.

ಈ ಪವಿತ್ರ ಕಾರ್ಯಕ್ರಮದಲ್ಲಿ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಹಾಗೂ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದು, ಭಕ್ತ ಸಮೂಹಕ್ಕೆ ಮಾರ್ಗದರ್ಶನ ನೀಡಿದರು

Related posts

ಗುರುವಾಯನಕೆರೆ ವಿದ್ವತ್ ಪ.ಪೂ. ಕಾಲೇಜಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ

Suddi Udaya

ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಸಾವು ಪ್ರಕರಣ: ಸೂಕ್ತ ತನಿಖೆ ನಡೆಸಿ ಕ್ರಮಕ್ಕೆ ಅಕ್ಬರ್ ಬೆಳ್ತಂಗಡಿ ಆಗ್ರಹ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಧ್ಯಾನ ತರಬೇತಿ

Suddi Udaya

ಪೆರಿಂಜೆ: ಕಾರು ಹಾಗೂ ರಿಕ್ಷಾ ನಡುವೆ ಭೀಕರ ರಸ್ತೆ ಅಪಘಾತ

Suddi Udaya

ನಿಡ್ಲೆ : ಬೂಡುಜಾಲು ನಿವಾಸಿ ಸತೀಶ್ ಹೃದಯಾಘಾತದಿಂದ ನಿಧನ

Suddi Udaya

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರು ಕಣಿಯೂರು ಗುತ್ತು ಮನೆಗೆ ಭೇಟಿ

Suddi Udaya
error: Content is protected !!