ಒಂದು ಜಗತ್ತು ಒಂದು ಮಂತ್ರ ವಿಶ್ವಶಾಂತಿ ಎಂಬ ಮೂಲ ಉದ್ದೇಶವನ್ನು ಇಟ್ಟುಕೊಂಡು ವಿಶ್ವದ ಎಲ್ಲಾ ದೇಶಗಳಲ್ಲಿ ಹಮ್ಮಿಕೊಂಡಿರುವ ನಮೋಕಾರ ಮಹಾಮಂತ್ರ ಪಠಣ ಕಾರ್ಯಕ್ರಮವು ಬೆಳ್ತಂಗಡಿಯ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರದ ಅನುವಂಶಿಕ ಆಡಳಿತ ಮುಖ್ಯಸ್ಥರಾದ ಕೆ ಜಯವರ್ಮರಾಜ ಬಳ್ಳಾಲ್ ಇವರ ಮಾರ್ಗದರ್ಶನದಡಿಯಲ್ಲಿ ಬಸದಿಯ ಸಮುಚ್ಚಯದಲ್ಲಿ ಶಾಂತಿಶ್ರೀ ಜೈನ ಸಮಾಜ ಬೆಳ್ತಂಗಡಿ ಇವರ ನೇತೃತ್ವದಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮದ ನೇತೃತ್ವವನ್ನು ಶಾಂತಿಶ್ರೀ ಜೈನ ಸಮಾಜದ ಅಧ್ಯಕ್ಷೆ ಶ್ರೀಮತಿ ತ್ರಿಶಾಲ ಜೈನ್ ವಹಿಸಿಕೊಂಡಿದ್ದು ಸರ್ವರ ಸಹಕಾರದಿಂದ ಕಾರ್ಯಕ್ರಮ ಅತ್ಯುತ್ತಮ ರೀತಿಯಲ್ಲಿ ಮೂಡಿಬಂತು. ವಿಶ್ವದ ಎಲ್ಲಾ ಕಡೆಗಳಲ್ಲೂ ಶಾಂತಿ ನೆಲೆಸಿ ಬದುಕು ಸುಂದರವಾಗಿಸುವ ಕನಸನ್ನು ಮನಸುಗೊಳಿಸುವ ಎನ್ನುವ ಮೂಲ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಮಂತ್ರವನ್ನು ಶ್ರಾವಕ- ಶ್ರಾವಕಿಯರು ಮಂತ್ತ್ರೋಚ್ಚಾರಣೆ ಮಾಡುವ ಮುಖಾಂತರ ಹಮ್ಮಿಕೊಂಡರು.