ಬೆಳ್ತಂಗಡಿ: ಗೇರುಕಟ್ಟೆ ಸೈಯದ್ ಉಮರ್ ಅಸ್ಸಖಾಫ್ ತಂಙಳ್ ಅವರ ನೇತೃತ್ವದ ಮನ್‌ಶರ್ ಅಕಾಡೆಮಿಯ ಇಂಗ್ಲೀಷ್ ಮೀಡಿಯಂ ಸ್ಕೂಲಿನ ನೂತನ ಪ್ರಾಂಶುಪಾಲರಾಗಿ ಝೀನತ್ ಬಾನು (MA, BEd, DPPEd) ರವರು ಏ. 9 ರಂದು ಅಧಿಕಾರ ಸ್ವೀಕರಿಸಿದರು.

ಸಂಸ್ಥೆಯ ಜನರಲ್ ಮ್ಯಾನೇಜರ್ ಮನ್‌ಶರ್ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಹೈದರ್ ಮರ್ದಾಳರವರು ಈ ನೇಮಕಾತಿ ಪತ್ರವನ್ನು ನೀಡುವುದರ ಮೂಲಕ ಕರ್ತವ್ಯಕ್ಕೆ ಹಾಜರಾದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ರಶೀದ್ ಕುಪ್ಪೆಟ್ಟಿ, ಅರೇಬಿಕ್ ವಿಭಾಗದ ಮುಖ್ಯಸ್ಥ ಅಬ್ದುಲ್ ಸಖಾಫಿ ನಿಂತಿಕಲ್ಲು, ಪ್ಯಾರಾ ಮೆಡಿಕಲ್ ಉಪ ಪ್ರಾಂಶುಪಾಲೆ ಗೌತಮಿ ಶರಣ್, ಪಿಯುಸಿ ವಿಭಾಗದ ಹಿರಿಯ ಉಪನ್ಯಾಸಕಿ ಹಂಸಶ್ರೀ, ಎಸ್ಸೆಸ್ಸೆಲ್ಸಿ ವಿಭಾಗದ ಮುಖ್ಯಸ್ಥೆ ಸುಹೈಬಾ ಜಾರಿಗೆ ಬೈಲು, ಶಿಕ್ಷಕಿ ಸಫ್‌ನಾಝ್ ಉಪಸ್ಥಿತರಿದ್ದು ಶುಭಹಾರೈಸಿದರು