September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿವರದಿ

ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವ

ಬೆಳ್ತಂಗಡಿ: ಕಲಿಯುಗದ ಕಾಮಧೇನು, ಭಕ್ತರ ಆರಧ್ಯ ದೇವರೆಂದೇ ಕರೆಯಲ್ಪಡುವ ಬೆಳ್ತಂಗಡಿ ತಾಲೂಕಿನಲ್ಲಿ ನೆಲೆನಿಂತ ಶ್ರೀಗುರುರಾಘವೇಂದ್ರ ಮಠದ ಬೆಳವಣಿಗೆ ತುಂಬಾ ಮಹತ್ವದ್ದು. ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘಟನೆ ಶಿಸ್ತು ಮತ್ತು ಸ್ವಚ್ಛತೆಗೆ ಆಧ್ಯತೆ ನೀಡಿದ್ದಾರೆ ಎಂದು ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಮುರಲಿ ಬಲಿಪ ಹೇಳಿದರು.

ಲಾಯಿಲ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದಿಂದ ಶ್ರೀಗುರುರಾಘವೇಂದ್ರ ಮಠದಲ್ಲಿ ಆ.10 ಆ.12 ರವರೆಗೆ ನಡೆಯುವ ರಾಘವೇಂದ್ರ ಸ್ವಾಮಿಗಳ 354 ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಆ.10 ರಂದು ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬೆಳ್ತಂಗಡಿ ತುಳು ಶಿವಳ್ಳಿ ಸಭಾ ಒಕ್ಕೂಟ ಅಧ್ಯಕ್ಷ ರಾಜ ಪ್ರಸಾದ್ ಪೊಳ್ನಾಯ ಶ್ರೀ ಗಣಪತಿ ಹೋಮದೊಂದಿಗೆ ಚಾಲನೆ ನೀಡಿದರು.

ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೇರಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳ್ತಂಗಡಿಯ ಸುಂದರ ಪರಿಸರದಲ್ಲಿ ಸೋಮಾವತಿ ನದಿ ತಟದಲ್ಲಿರುವ ರಾಯರ ಮಂದಿರ, ಸಣ್ಣ ಮಂತ್ರಾಲಯ ಎಂಬ ನಂಬಿಕೆಗೆ ಪಾತ್ರವಾಗಿದೆ. ವರ್ಷದಿಂದ ವರ್ಷಕ್ಕೆ ಇದರ ಪ್ರತೀತಿ ಹೆಚ್ಚುತ್ತಿದೆ. ಭಕ್ತರ ಸಂಖ್ಯೆಯು ಅಧಿಕವಾಗುತ್ತಿದೆ ಎಂದರು.

ಲಾಯಿಲ ಗ್ರಾ.ಪಂ ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಉಪಾಧ್ಯಕ್ಷ ವಿ.ಆರ್.ನಾಯಕ್ ಮತ್ತು ಮಹಾಬಲ ಶೆಟ್ಟಿ ಹಾಗೂ ಟ್ರಸ್ಟಿ ಸೋಮೇಗೌಡ, ಸುಶೀಲಾ ಹೆಗ್ಡೆ ಉಪಸ್ಥಿತರಿದ್ದರು.

ಟ್ರಸ್ಟಿ, ನಿವೃತ್ತ ಪ್ರಾಂಶುಪಾಲ ಏ.ಕೃಷ್ಣಪ್ಪ ಪೂಜಾರಿ ಪ್ರಾಸ್ತಾವಿಸಿ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ವಸಂತ ಸುವರ್ಣ ವಂದಿಸಿದರು. ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

ಇಂದು( ಆ.11) ಬೆಳಿಗ್ಗೆ 11 ಗಂಟೆಗೆ ಕ್ಷೇತ್ರದಲ್ಲಿ ನಿರ್ಮಾಣವಾದ ಶ್ರೀಗುರು ಪ್ರಸಾದ ಮಂಟಪ ಉದ್ಘಾಟನೆ ನೆರವೇರಲಿದೆ.

Related posts

ಪಿಂಚಣಿ ಮಸೂದೆಯನ್ನು ತಿದ್ದುಪಡಿ ಮಾಡುವಂತೆ ರಾಜ್ಯ ಸರಕಾರಿ ನಿವೃತ ನೌಕರರ ಸಂಘದಿಂದ ಉಪತಹಶೀಲ್ದಾರ್ ರವರ ಮೂಲಕ ಮನವಿ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಶ್ರೀ ಗುರು ಪೂಜೋತ್ಸವ: ಸರ್ವೇಶ್ವರೀ ದೇವಿಯ ಪೂಜೆಯಲ್ಲಿ ನೂರಾರು ಮಹಿಳಾ ವೃತಧಾರಿಗಳು ಭಾಗಿ, ಸಾಧಕರಿಗೆ ಸನ್ಮಾನ,

Suddi Udaya

ಉಜಿರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ನಿಧನ

Suddi Udaya

ಕುಕ್ಕಳ, ಪಾರೆಂಕಿ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

Suddi Udaya

ನ.9: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಂಚಿ ಕಾಮಕೋಟಿ ಪೀಠಾಧಿಪತಿ ಪೂಜ್ಯ ಶಂಕರವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ ಪುರಪ್ರವೇಶ

Suddi Udaya

ಬೆಳ್ತಂಗಡಿ ಪ.ಪಂ. ಮತ್ತು ರಾಜ ಕೇಸರಿ ಸಂಘಟನೆ ವತಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya
error: Content is protected !!