23.6 C
ಪುತ್ತೂರು, ಬೆಳ್ತಂಗಡಿ
April 15, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಕಲ್ಲೇರಿ ಎಟಿಎಂ ಕೇಂದ್ರಕ್ಕೆ ನುಗ್ಗಿದ ಖದೀಮರು, ಕಳ್ಳತನಕ್ಕೆ ಯತ್ನ ಸೊತ್ತುಗಳಿಗೆ ಹಾನಿ

ಬೆಳ್ತಂಗಡಿ : ಇಲ್ಲಿಗೆ ಸಮೀಪದ ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಖಾಸಗಿ ಕಂಪೆನಿಯ ಎಟಿಎಂ ಕೇಂದ್ರವೊಂದಕ್ಕೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ಯತ್ನಿಸಿ ಸೊತ್ತುಗಳನ್ನು ಹಾನಿಗೊಳಿಸಿದ ಘಟನೆ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.

ಕಲ್ಲೇರಿಯಲ್ಲಿನ ತಣ್ಣೀರುಪಂತ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡದಲ್ಲಿ ಇಂಡಿಯಾ ವನ್ ಎಂಬ ಹೆಸರಿನ ಖಾಸಗಿ ಸಂಸ್ಥೆಯ ಏ ಟಿ ಎಂ ಕೇಂದ್ರ ಕ್ಕೆ ನುಗ್ಗಿದ ಕಳ್ಳರು ಅಲ್ಲಿನ ಸಿ ಸಿ ಕ್ಯಾಮರಾ ವನ್ನು ಕಿತ್ತೆಗೆಯಲು ಯತ್ನಿಸಿ , ಏ ಟಿ ಎಂ ಮಿಷಿನ್ ನನ್ನು ತೆರೆಯಲು ಯತ್ನಿಸಿ ಏ ಟಿ ಎಂ ಮಿಷಿನ್ ಗೆ ಹಾನಿಯನ್ನುಂಟು ಮಾಡಲಾಗಿತ್ತು.


ಈ ಬಗ್ಗೆ ಇಂಡಿಯಾ ವನ್ ಕಾಲ್ ಸೆಂಟರ್ ನಿಂದ ಕಲ್ಲೇರಿಯ ಎ ಟಿ ಎಂ ಕೇಂದ್ರದಲ್ಲಿ ಯಾವುದೋ ಅನುಚಿತ ಕೃಉತ್ಯ ನಡೆಯುತ್ತಿದೆ ಎಂಬ ಸಂದೇಶ ರವಾನೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕಳವು ಯತ್ನ ಪ್ರಕರಣ ನಡೆದಿರುವುದು ಕಂಡು ಬಂದಿತ್ತು. ಈ ಬಗ್ಗೆ ಪ್ರಶಾಂತ್ ಡಿ ಕೋಸ್ಟಾ ರವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


ಸುರಕ್ಷತೆಯ ಹೊರತಾಗಿಯೂ ಪದೇ ಪದೇ ಕಳವು ಯತ್ನ: ಖಾಸಗಿ ಎ ಟಿ ಎಂ ಕೇಂದ್ರವು ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಪ್ರತಿ ಕೇಂದ್ರದ ಚಲನವಲನಗಳ ಬಗ್ಗೆ ನಿಗಾವಿರಿಸುವ ವ್ಯವಸ್ಥೆಯನ್ನು ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಎ ಟಿ ಎಂ ಕೇಂದ್ರದ ಒಳ ಹೊಕ್ಕು ಮಿಷಿನ್ ತೆರೆಯಲು ಯತ್ನಿಸಿದರೂ, ಹಣತುಂಬಿದ ವಿಭಾಗದ ಬಾಗಿಲು ತೆರೆಯಬೇಕಾದರೆ ಒಟಿಪಿ ಆಧಾರಿತ ವ್ಯವಸ್ಥೆ ಅಳವಡಿಸಿದ ಪರಿಣಾಮ ಕಳ್ಳರಿಗೆ ಹಣ ಕದಿಯಲು ಅಸಾಧ್ಯವಾಗುತ್ತಿದೆ. ಕೆಲ ಸಮಯದ್ ಅಹಿಂದೆ ತೆಕ್ಕಾರು ಎಂಬಲ್ಲಿ ಇದೇ ರೀತಿ ಎಟಿಎಂ ಕೇಂದ್ರದಲ್ಲಿ ಕಳವು ಯತ್ನ ನಡೆದಿದ್ದು, ಇದೀಗ ಕಲ್ಲೇರಿಯಲ್ಲಿ ಮತ್ತೇ ಅದೇ ತೆರನಾದ ಕಳವು ಯತ್ನ ನಡೆದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪರಿಸರದ ಸಿಸಿ ಕ್ಯಾಮರಾದಲ್ಲಿನ ದೃಶ್ಯಾವಳಿಗಳ ಮೇಲೆ ನಿಗಾವಿರಿಸಿ ಕಳವಿಗೆ ಯತ್ನಿಸಿದ ವ್ಯಕ್ತಿಗಳನ್ನು ಗುರುತಿಸಲು ಶ್ರಮಿಸುತ್ತಿದ್ದಾರೆ.

Related posts

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ತಂದೆಯಂದಿರ ದಿನಾಚರಣೆ

Suddi Udaya

ಬೆಳ್ತಂಗಡಿ: ಶಶಾಂಕ ಕುಳಮರ್ವ ರವರಿಗೆ ಸುರತ್ಕಲ್ ಎನ್.ಐ.ಟಿ.ಕೆ. ಯಿಂದ ಪಿ.ಎಚ್.ಡಿ. ಪದವಿ

Suddi Udaya

ಎಕ್ಸಿಟ್ ಪೋಲ್ ವರದಿ: ಮತ್ತೊಮ್ಮೆ ಎನ್.ಡಿ.ಎ ಮೈತ್ರಿಕೂಟ ಅಧಿಕಾರಕ್ಕೆ ಎನ್‌ಡಿಎ ಮೈತ್ರಿಕೂಟಕ್ಕೆ 350ಕ್ಕಿಂತ ಹೆಚ್ಚು ಸ್ಥಾನ: ಕಾಂಗ್ರೆಸ್ ನೇತೃತ್ವ ಮೈತ್ರಿಕೂಟ 125ರಿಂದ 150ಸ್ಥಾನ

Suddi Udaya

ಭವಿಷ್ಯದ ಚಿತ್ರರಂಗದ ಭರವಸೆಯ ಕಲಾವಿದ ರಾಜ್ ಚರಣ್ ಬ್ರಹ್ಮಾವರ್

Suddi Udaya

ಬೆಳ್ತಂಗಡಿ ಪ.ಪಂ. ನಾಲ್ಕನೇ ವಾರ್ಡಿನ ಹಿಂದೂ ರುದ್ರ ಭೂಮಿಗೆ ರೂ 40 ಲಕ್ಷ ವೆಚ್ಚದಲ್ಲಿ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯ ವತಿಯಿಂದ ಹೊಸವರ್ಷದ ಪ್ರಯುಕ್ತ ಸೌಹಾರ್ದ ಕೂಟ

Suddi Udaya
error: Content is protected !!