ಮಚ್ಚಿನ: “ಮಾಯವಾಗುತ್ತಿದೆ ಮಚ್ಚಿನ ಗ್ರಾಮದ ನೆರೋಲ್ಪಲ್ಕೆ ಬಸ್ ತಂಗುದಾಣ…” ಹೌದು ಮಚ್ಚಿನ ಗ್ರಾಮದ ನೆರೋಲ್ಪಲ್ಕೆ ಯಲ್ಲಿ ಸುಮಾರು ವರ್ಷಗಳ ಹಿಂದೆ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಗೊಂಡಿದ್ದರೂ ಈಗ ಮಾತ್ರ ಅದು ಜನರಿಗೆ ಉಪಯೋಗಕ್ಕೆ ಇಲ್ಲದಂತಾಗಿದೆ.

ಬಿಸಿಲು, ಗಾಳಿ ಮಳೆಗೆ ಜನರು ಬಸ್ಸಿಗಾಗಿ ರಸ್ತೆ ಬದಿಯ ಮರದ ಅಡಿಯಲ್ಲಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ದಾಣದ ಸುತ್ತವು ಗಿಡಗಂಟಿ ಪೊದೆಗಳಿಂದ ಮುತ್ತಿಹೋಗಿವೆ. ಈ ಬಸ್ ತಂಗುದಾಣಕ್ಕೆ ಹೋಗಲು ಸರಿಯಾದ ದಾರಿಯು ಇಲ್ಲ ಚರಂಡಿಗಳನ್ನು ತೆಗೆದು ಮೋರಿಯು ಹಾಕದೆ ಚರಂಡಿ ಹಾರಿ ಬಸ್ಸಿಗೆ ಓಡೋ ಸ್ಥಿತಿಯಲ್ಲಿದೆ. ಈ ಸ್ಥಳದಲ್ಲಿ ಸುತ್ತುಮುತ್ತಲು ಹಲವಾರು ಮನೆಗಳಿದ್ದು ಶಾಲಾ ಮಕ್ಕಳು ಬಸ್ಸಿಗಾಗಿ ರಸ್ತೆ ಬದಿಯಲ್ಲಿ ನಿಲ್ಲುವಂತ ಪರಿಸ್ಥಿತಿಯಲ್ಲಿದೆ. ಇನ್ನೇನು ಮಳೆಗಾಲ ಪ್ರಾರಂಭವಾದರೆ ಸಿಡಿಲು ಮಳೆಗೆ ರಸ್ತೆ ಬದಿಯಲ್ಲಿ ನಿಲ್ಲುವಂತಹ ಸ್ಥಿತಿಯಲ್ಲಿದೆ. ರಾತ್ರಿ ಹೊತ್ತು ಸರಿಯಾದ ದಾರಿದೀಪವು ಇಲ್ಲದೆ ಕತ್ತಲೆಯಲ್ಲಿ ಬಸ್ಸಿಗಾಗಿ ಕಾಯುವಂತಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಬಸ್ ನಿಲ್ದಾಣದ ವ್ಯವಸ್ಥೆಯನ್ನು ಒದಗಿಸುವಂತೆ ಸ್ಥಳೀಯ ಗ್ರಾಮಸ್ಥರ ಆಗ್ರಹವಾಗಿದೆ.
ಈ ಭಾಗದ ಸಾರ್ವಜನಿಕ ಬಸ್ ನಿಲ್ದಾಣವು ಎಲ್ಲರಿಗೂ ಅವಶ್ಯವಾಗಿದೆ. ಆದರೆ ಬಸ್ ನಿಲ್ದಾಣಕ್ಕೆ ಹೋಗಲು ಸರಿಯಾದ ದಾರಿ ಇಲ್ಲ. ಬಸ್ ನಿಲ್ದಾಣಕ್ಕೆ ನಾಮಫಲಕ, ಲೈಟ್ ವ್ಯವಸ್ಥೆ ಇನ್ನಿತರ ಎಲ್ಲಾ ಸೌಕರ್ಯಗಳೊಂದಿಗೆ ಒಂದು ಸುಂದರ ಬಸ್ ನಿಲ್ದಾಣ ಮಾಡುವಂತೆ ನಮ್ಮೆಲ್ಲರ ಒತ್ತಾಯ.
-ಅನಂತಕೃಷ್ಣ ಭಟ್ ಕುಕ್ಕಿಲ