ಮಿತ್ತಬಾಗಿಲು: ಮಲವಂತಿಗೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಗುರುಪೂಜೆ ಉತ್ಸವವು ಏ.10ರಂದು ನಡೆಯಿತು.
ಮಲವಂತಿಗೆ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರಕ್ಕೆ 2022ನೇ ಸಾಲಿನ ಕಾರ್ಯದಕ್ಷತೆ ಹಾಗೂ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾದ ಬಂಟ್ವಾಳ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಎಸ್. ವಿಜಯ ಪ್ರಸಾದ್ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಎಸ್. ವಿಜಯ ಪ್ರಸಾದ್ ರವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಬಳಿಕ ಮಾತನಾಡಿದ ಅವರು 25 ವರ್ಷಗಳಿಂದ ಇಲಾಖೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಹಿರಿಯರ ಮಾರ್ಗದರ್ಶನದಲ್ಲಿ ಯುವ ಜನತೆ ನಡೆದುಕೊಂಡು ಹೋಗಬೇಕು, ಒಳ್ಳೆಯ ಸಂಘಟನೆಗಳನ್ನು ಮಾಡುವುದು ಸಮಾಜದ ಜವಾಬ್ದಾರಿ. ನಾವು ಸಮಾಜಕ್ಕೆ ಮತ್ತು ಪರಿಸರಕ್ಕೆ ಏನು ಕೊಡಬಹುದು ಎಂದು ತಿಳಿದು ಅದರ ಬಗ್ಗೆ ಮುಂದುವರೆದಾಗ ಪ್ರಗತಿಯ ಹಾದಿಯಲ್ಲಿ ಸಾಗಲು ಸಾಧ್ಯ, ಮಕ್ಕಳು ಪ್ರಯತ್ನ ಪಟ್ಟರೆ ಏನು ಬೇಕಾದರೂ ಸಾಧಿಸಬಹುದು. ನಿಮ್ಮ ಊರಿನಲ್ಲಿ ಸನ್ಮಾನ ತೆಗೆದುಕೊಳ್ಳಬೇಕಾದರೆ ಮುಖ್ಯ ಕಾರಣ ನನ್ನ ತಂದೆ- ತಾಯಿ ಎಲ್ಲರಿಗೂ ಒಂದಲ್ಲ ಒಂದು ರೀತಿ ಸಾಮರ್ಥ್ಯ ಇದೆ. ಆ ಸಾಮರ್ಥ್ಯವನ್ನು ನಾವು ಬಳಸಿಕೊಳ್ಳುವುದರಲ್ಲಿದೆ. ನನಗೆ ಕರ್ತವ್ಯವೇ ದೇವರು ನಂತರ ಉಳಿದದ್ದು ಎಂದು ನಂಬಿದ್ದೇನೆ. ನಾವು ಹೋದಲ್ಲಿಯೇ ನಮ್ಮ ಊರು ನನ್ನಿಂದ ಕಾನೂನು ರೀತಿಯ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತೇನೆ ಎಂದರು.
ವೇದಿಕೆಯಲ್ಲಿ ಶ್ರೀ ಗುರು ನಾರಾಯಣ ಸೇವಾ ಸಂಘದ ಕಾರ್ಯದರ್ಶಿ ಲೋಕೇಶ್ ಪೂಜಾರಿ ಕುಕ್ಕಾವು, ಕಲಶೋತ್ಸವ ಸಮಿತಿಯ ಅಧ್ಯಕ್ಷ ಮುಕುಂದ ಸುವರ್ಣ ಬಂಗಾಡಿ, ಗುರಿಕಾರರಾದ ವಿಠಲ ಪೂಜಾರಿ ಹೊಸಮನೆ, ಯುವ ವಾಹಿನಿ ಸಂಚಲನ ಸಮಿತಿಯ ಅಧ್ಯಕ್ಷ ನಿತೇಶ್ ಅಡ್ಕದಕರೆ, ಕಾರ್ಯದರ್ಶಿ ಹರೀಶ್ ಮಾಲೂರು, ನಿರ್ದೇಶಕರಾದ ದಯಾನಂದ ಕಂಗಂತ್ಯಾರು, ವೆಂಕಪ್ಪ ಪೂಜಾರಿ ಮಾಲೂರು, ಸಚೀನ್ ನೂಜೋಡಿ, ಬೆಳ್ತಂಗಡಿ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಭಗೀರಥ ಜಿ. ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಸುರೇಂದ್ರ ಬಂಗಾಡಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.