ಬೆಳ್ತಂಗಡಿ: ಉಜಿರೆ ಕಾಲೇಜು ರಸ್ತೆಯಲ್ಲಿ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಕಾರು ಕಳವಾದ ಘಟನೆ ಸಂಭವಿಸಿದ್ದು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉಜಿರೆ ನಿವಾಸಿ ವ್ಯಾಪಾರಿಯಾಗಿರುವ ಅಬ್ದುಲ್ ಮತ್ತಲೀಬ್ ಎಂಬರ ಆಲ್ಟೊ ಕಾರು ಕಳ್ಳತನವಾಗಿದೆ.
ಇವರು ಕಾರನ್ನು ಉಜಿರೆ ಕಾಲೇಜು ರಸ್ತೆಯಲ್ಲಿರುವ ತಮ್ಮ ಅಂಗಡಿಯ ಸಮೀಪದ ಪಾರ್ಕಿಂಗ್ ಜಾಗದಲ್ಲಿ ಕಾರನ್ನು ನಿಲ್ಲಿಸಿದ್ದರು. ರಾತ್ರಿ ಅಂಗಡಿ ಮುಚ್ಚಿ ಬಂದು ನೋಡಿದಾಗ ನಿಲ್ಲಿಸಿದ್ದ ಕಾರು ನಾಪತ್ತೆಯಾಗಿತ್ತು. ಕಾರಿನ ಅಂದಾಜು ಮೌಲ್ಯ 6,50,000 ಎಂದು ಅಂದಾಜಿಸಲಾಗಿದೆ. ಎ.29ರಂದು ಘಟನೆ ನಡೆದಿದ್ದು ಕಾರಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನಲೆಯಲ್ಲಿ ಘಟನೆಯ ಬಗ್ಗೆ ಅಬ್ದುಲ್ ಮುತ್ತಲೀಫ್ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಪೊಲೀಸರು ಪ್ರಕರಣದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.