
ಬೆಳ್ತಂಗಡಿ: ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ದೂರವಾಣಿ ಕೇಬಲ್ ಹೊತ್ತಿ ಉರಿದ ಘಟನೆ ಮುಂಡಾಜೆಯಲ್ಲಿ ಭಾನುವಾರ ನಡೆದಿದೆ.
ಇಲ್ಲಿಯ ಮಲ್ಲಿಕಟ್ಟೆ ಪರಿಸರದ ದೂರವಾಣಿ ಸಂಪರ್ಕದ ಕೇಬಲ್ ಗಳನ್ನು ವಿದ್ಯುತ್ ಕಂಬಕ್ಕೆ ಅಳವಡಿಸಲಾಗಿದ್ದು, ಘಟನೆಯಲ್ಲಿ ಸುಮಾರು 20 ಮೀ.ನಷ್ಟು ಕೇಬಲ್ ಸುಟ್ಟು ಹೋಗಿದ್ದು ಕಂಬದ ಭಾಗವು ಕರಟಿದೆ.
ಸ್ಥಳೀಯರು ತಕ್ಷಣ ಮೆಸ್ಕಾಂಗೆ ಮಾಹಿತಿ ನೀಡಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ತಿಳಿಸಿ ಬಳಿಕ ಬೆಂಕಿಯನ್ನು ಆರಿಸಿದರು.
ಈ ಪ್ರದೇಶದಲ್ಲಿ ಅರಣ್ಯ ಭಾಗ,ಮನೆಗಳು ಇದ್ದು ಸ್ಥಳೀಯರ ಸಕಾಲಿಕ ಸ್ಪಂದನೆಯಿಂದ ಹೆಚ್ಚಿನ ಅಪಾಯ ಉಂಟಾಗುವುದು ತಪ್ಪಿದೆ.