
ಉಜಿರೆ: ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಳೆಂಜದ ನಂದಗೋಕುಲ ಗೋಶಾಲೆಯ ವತಿಯಿಂದ ಅಂಬೇಡ್ಕರ್ ಜಯಂತಿ ಮತ್ತು ವಿಶು ಹಬ್ಬವನ್ನು ಎಸ್. ಸಿ ಕಾಲೋನಿ ಕುಂಟಿನಿ ಉಜಿರೆಯಲ್ಲಿ ಆಚರಿಸಲಾಯಿತು.

ಟ್ರಸ್ಟ್ ನ ಉಪಾಧ್ಯಕ್ಷ ನಾರಾಯಣ್ ಗೌಡ ಕೊಳಂಬೆಯವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುಭಾಷ್ ಗುರುವಾಯನಕೆರೆ, ಲಕ್ಷ್ಮಿ ನಾರಾಯಣ ಶೆಣೈ, ದಿನೇಶ್ ಚಾರ್ಮಾಡಿ, ಸಂತೋಷ್ ಅತ್ತಾಜೆ, ಅಂಬೇಡ್ಕರ್ ಬಗ್ಗೆ ಹಿತನುಡಿಯನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಶಾಲೆಯ ಅಧ್ಯಕ್ಷ ಡಾ.ಎಂ.ಎಂ ದಯಾಕರ್ ವಹಿಸಿಕೊಂಡು ಅಂಬೇಡ್ಕರ್ ಜಯಂತಿಯ ಮಹತ್ವ, ಅಂಬೇಡ್ಕರ್ ಅವರ ಜೀವನದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಆಗಮಿಸಿದ ಸ್ಥಳೀಯ ಬಾಂಧವರಿಗೆ ವಿಶು ಕಣಿಯನ್ನು ವಿತರಣೆ ಮಾಡಲಾಯಿತು. ಶ್ರೀಮತಿ ಕವಿತಾ ಕಾರ್ಯಕ್ರಮ ನಿರೂಪಿಸಿದರು. ಗೋಶಾಲೆಯ ಕಾರ್ಯದರ್ಶಿ ನವೀನ್ ನೆರಿಯ ಧನ್ಯವಾದ ಸಲ್ಲಿಸಿದರು. ಟ್ರಸ್ಟ್ ನ ಮ್ಯಾನೇಜರ್ ಶ್ರೀಶ ಭಟ್ ಮತ್ತು ಶ್ರೀಮತಿ ಅನುಶ್ರೀ ಮುರುಳಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.