September 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತ: ಕೊಲ್ಲಿ ದೇವಸ್ಥಾನದ ಮಾಜಿ ಮೊಕ್ತೇಸರ, ಯಕ್ಷಗಾನ ಅರ್ಥದಾರಿ ಮಂಜುನಾಥ ಕಾಮತ್ ನಿಧನ

ಕಡಿರುದ್ಯಾವರ: ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತ, ಕೊಲ್ಲಿ ಶ್ರೀ ದುರ್ಗಾದೇವಿ, ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಮೊಕ್ತೇಸರ ಪ್ರಗತಿಪರ ಕೃಷಿಕ ಯಕ್ಷಗಾನ ಅರ್ಥದಾರಿಯಾಗಿ ಪ್ರಖ್ಯಾತಿಯನ್ನು ಪಡೆದಿದ್ದ ಕಡಿರುದ್ಯಾವರ ಗ್ರಾಮದ ಬಂಡಾಜೆ ನಿವಾಸಿ ಮಂಜುನಾಥ ಕಾಮತ್ (89ವ) ಅವರು ವಯೋಸಹಜ ಅಸೌಖ್ಯದಿಂದ ಬಳಲಿ ಇಂದು (ಎ.14 ರಂದು) ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.


ಕಡಿರುದ್ಯಾವರ ಗ್ರಾಮದ ಬಂಡಾಜೆ ನಿವಾಸಿಯಾಗಿರುವ ಮಂಜುನಾಥ ಕಾಮತ್ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರಾಗಿದ್ದಾರೆ. ಮಾಜಿ ಸಚಿವ ಗಂಗಾಧರ ಗೌಡ ಸಚಿವರಾಗಿದ್ದ ಅವಧಿಯಲ್ಲಿ ಅವರು ಬೆಳ್ತಂಗಡಿ ಭೂ ನ್ಯಾಯಮಂಡಳಿಯ ಸದಸ್ಯರಾಗಿ, ತಾಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ, 20 ಅಂಶಗಳ ಕಾರ್ಯಕ್ರಮ ಅನುಷ್ಠಾನ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.


ಕೊಲ್ಲಿ ಶ್ರೀ ದುರ್ಗಾದೇವಿ, ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರಾಗಿ ದೇವಸ್ಥಾನದ ಅಭಿವೃದ್ಧಿಗೆ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡಿದ್ದರು. ಯಕ್ಷಗಾನ ಅರ್ಥದಾರಿಯಾಗಿ ಪ್ರಖ್ಯಾತಿಯನ್ನು ಪಡೆದಿದ್ದ ಇವರು ಬಂಗಾಡಿ ಸಿ.ಎ ಬ್ಯಾಂಕ್‌ನ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಅಲ್ಲದೆ ವರ್ತಕರಾಗಿ, ಪ್ರಗತಿಪರ ಕೃಷಿಕರಾಗಿಯೂ ಜನಮನ್ನಣೆಯನ್ನು ಗಳಿಸಿದ್ದರು.
ಮೃತರು ಪುತ್ರ ಸತೀಶ್ ಕಾಮತ್ ಹಾಗೂ ನಾಲ್ವರು ಹೆಣ್ಣು ಮಕ್ಕಳು, ಬಂಧು-ವರ್ಗದವರು, ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.

Related posts

ಸೆ.10: ನಾಲ್ಕೂರು ಯುವಶಕ್ತಿ ಫ್ರೆಂಡ್ಸ್ ನಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ: ಧಾರ್ಮಿಕ ಕಾರ್ಯಕ್ರಮ, ಮುದ್ದು ಕೃಷ್ಣ ಸ್ಪರ್ಧೆ, ವಿವಿಧ ಆಟೋಟ ಸ್ಪರ್ದೆಗಳು

Suddi Udaya

ಸೆ.14-16: ಲಾಯಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 38ನೇ ವರ್ಷದ ಗಣೇಶೋತ್ಸವ

Suddi Udaya

ಸೆ. 17 : ಅಳದಂಗಡಿಯಲ್ಲಿ ಮುದ್ದು ಕೃಷ್ಣ ಸ್ಪರ್ಧೆ

Suddi Udaya

ಇಲಂತಿಲ ಗ್ರಾ. ಪಂ. ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ತಿಮ್ಮಪ್ಪ ಗೌಡ, ಉಪಾಧ್ಯಕ್ಷರಾಗಿ ಸವಿತಾ ಹೆಚ್ ಆಯ್ಕೆ

Suddi Udaya

ಶಾಸಕ ಹರೀಶ್ ಪೂಂಜರಿಗೆ ಕರ್ನಾಟಕ ಟಿವಿ “ಲೀಡರ್ ಅವಾರ್ಡ್ಸ್”

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆ ಕೊಕ್ಕಡ ವಲಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟಗಳ ಪದಗ್ರಹಣ ಸಮಾರಂಭ

Suddi Udaya
error: Content is protected !!