September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಭಗವದ್ಗೀತೆಯ ಕಂಠಪಾಠ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯನ್ನು ಪಡೆದ ಕುಮಾರಿ ಅದ್ವಿತಿ ರಾವ್ ರವರಿಗೆ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ವತಿಯಿಂದ ಸನ್ಮಾನ

ಕನ್ಯಾಡಿ I ಗ್ರಾಮದ ಪಡ್ಪು ಶ್ರೀಮತಿ ಅಖಿಲ ಮತ್ತು ಅಶ್ವಥ್ ದಂಪತಿಗಳ ಪುತ್ರಿಯಾದ ಕುಮಾರಿ ಅದ್ವಿತಿ ರಾವ್ ಇವರು 2024 ಡಿ.1-ರಂದು ದಕ್ಷಿನಾಮ್ನಾಯ ಶ್ರೀ ಶಾರದಾ ಪೀಠಮ್ ಶೃಂಗೇರಿ ಇಲ್ಲಿ ಜಗದ್ಗುರುಗಳ ಸನ್ನಿಧಿಯಲ್ಲಿ ನಡೆದ ಭಗವದ್ಗೀತೆಯ 18 ಅಧ್ಯಾಯದ 700 ಶ್ಲೋಕದ ಕಂಠಪಾಠ ಪರೀಕ್ಷೆ (ಗೀತಾ ಜ್ಞಾನ ಯಜ್ಞ) ದಲ್ಲಿ ಪ್ರಥಮ ಶ್ರೇಣಿಯನ್ನು ಪಡೆದು, ಶೃಂಗೇರಿ ಜಗದ್ಗುರುಗಳ ಆಶೀರ್ವಾದವನ್ನು ಪಡೆದುದಕ್ಕಾಗಿ ಏ.10 ರಂದು ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಜಾತ್ರಾ ಮಹೋತ್ಸವದ ಸುಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರು ಸತೀಶ್ಚಂದ್ರ ಜೈನ್ ಸುರ್ಯಗುತ್ತು, ಸಂಗ್ರಾಮ್ ಸುರ್ಯಗುತ್ತು ಇವರು ದೇವರ ಸನ್ನಿಧಿಯಲ್ಲಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿ ಮಂಡಳಿಯ ಬಿ. ರಾಜಶೇಖರ ಅಜ್ರಿ, ಮುನಿರಾಜ ಅಜ್ರಿ, ನಾಭಿರಾಜ್ ಜೈನ್ ಉಪಸ್ಥಿತರಿದ್ದರು.

Related posts

ಮುಂಡಾಜೆ ಬಂಟರ ಗ್ರಾಮ ಸಮಿತಿ ಮಾಸಿಕ ಸಭೆ: ಅವೈದಿಕ ಪರಂಪರೆಯ ದೈವರಾಧನೆ ಹಾಗೂ ದೈವರಾಧನೆಯಲ್ಲಿ ಬಂಟರು-ಚರ್ಚಾಗೋಷ್ಠಿ

Suddi Udaya

ಬೆಳ್ತಂಗಡಿ: ಪರಿಶಿಷ್ಟ ಜಾತಿ-ಪಂಗಡಗಳ ಕುಂದುಕೊರತೆಗಳ ಸಭೆ

Suddi Udaya

ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಕಲೋತ್ಸವದಲ್ಲಿ ಎಲ್ . ಸಿ. ಆರ್ ವಿದ್ಯಾ ಸಂಸ್ಥೆಗೆ ಸಮಗ್ರ ಪ್ರಶಸ್ತಿ

Suddi Udaya

ಬಂದಾರು ಗ್ರಾ.ಪಂ.ನಲ್ಲಿ ವಿವಿಧ ಕೃಷಿಯ ಮಾಹಿತಿ ಕಾರ್ಯಕ್ರಮ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ ಮಹಾಗಣಪತಿ ದೇವರ ಪೂಜೆಯನ್ನು ಸುದೀರ್ಘ ಕಾಲ ನೇರವೇರಿಸಿದ ಬಾಲಕೃಷ್ಣ ಭಟ್ ನಿಧನ

Suddi Udaya

ಬೆಳ್ತಂಗಡಿ ಹಂಸ ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಅಪ್ಲೆಯನ್ಸ್& ಫರ್ನಿಚರ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ

Suddi Udaya
error: Content is protected !!