ಬೆಳ್ತಂಗಡಿ: ಇಲ್ಲಿಯ ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಏ.12ರಂದು ನಡೆಯಿತು.

ದಯಾನಂದ ರೈ ಅಧ್ಯಕ್ಷತೆ ವಹಿಸಿದರು. ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ, ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸವಣಾಲು ಶಾಲೆಯ ಹಿರಿಯ ವಿದ್ಯಾರ್ಥಿ ನ್ಯಾಯವಾದಿ ಮುರಳಿ ಬಿ., ಉದ್ಯಮಿ ಸತೀಶ್ ಬಂಗೇರ ಅರುವದಕಲ ಬೆಂಗಳೂರು, ಸದಾಶಿವ ಭಟ್ ಮಜಲು ಮನೆ ಸವಣಾಲು ಉದ್ಯಮಿ ಪ್ರೈವೇಟ್ ಲಿಮಿಟೆಡ್ ಬೆಂಗಳೂರು, ಪಿಡಬ್ಲ್ಯೂ ಡಿ ಮಂಗಳೂರು ಸಹಾಯಕ ಅಭಿಯಂತರರು ಶ್ರೀಮತಿ ಪ್ರತಿಭಾ ಡಿ , ರಾಜೇಶ್ ಭಂಡಾರಿ ಅಂಗಾರರದೊಟ್ಟು ಚಾರ್ಟೆಡ್ ಅಕೌಂಟೆಂಟ್ ಬೆಂಗಳೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿ ಗೋಪಾಲಗೌಡ,
ದಾನಿಗಳಾದ ಕೃಷ್ಣಪ್ಪ ಗೌಡ ದೇವಸ, ಅಬ್ಬಾಸ್ ಖಾನ್, ನಿರ್ದೇಶಕರು ತ್ರಿಪಾತ್ ಲಾಜಿಸ್ಟಿಕ್ ಬೆಂಗಳೂರು, ಶ್ರೀಮತಿ ಮಹಾಲಕ್ಷ್ಮೀ ಕೆ ನಿವೃತ್ತಿ ಶಿಕ್ಷಕಿ ಸವಣಾಲು ಉಪಸ್ಥಿತರಿದ್ದರು.