July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ: ಎಸ್ ಡಿ ಯಂ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜ್‌ ಹೈಸ್ಕೂಲ್ ಮಟ್ಟದ ಶಾಲಾ ವಿದ್ಯಾರ್ಥಿಗಳಿಗೆ ಒಂಬತ್ತು ದಿನದ ಬೇಸಿಗೆ ಶಿಬಿರವನ್ನು ಎ.15 ರಿಂದ ಆಯೋಜಿಸಿದ್ದು, ಉದ್ಘಾಟನೆಯನ್ನು ಎಸ್.ಡಿ.ಯಂ. ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕರಾದ ಪ್ರೊ. ಎಸ್ ಎನ್‌ ಕಾಕತ್ಕರ್‌ ನೆರವೇರಿಸಿದರು.


ಈ ಸಂದರ್ಭದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ, ವಿದ್ಯಾರ್ಥಿಯು ಪಠ್ಯ-ಪೂರಕ ಕಲಿಯುವಿಕೆಯಿಂದ ಫೂರ್ಣನಾಗುತ್ತಾನೆ. ಪಠ್ಯೇತರ ಚಟುವಟಿಕೆಗಳು ಮತ್ತು ಕೌಶಲ್ಯಾಭಿವೃದ್ಧಿಯಿಂದಾಗಿ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯಾಗಿ ಪರಿಪೂರ್ಣನಾಗುತ್ತಾನೆ. ಈ ನಿಟ್ಟಿನಲ್ಲಿ ಬೇಸಿಗೆ ಶಿಬಿರಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ನುಡಿದರು.


ಈ ಶಿಬಿರದಲ್ಲಿ ಕಂಪ್ಯೂಟರ್ ಅಸೆಂಬ್ಲಿಂಗ್,ಇಲೆಕ್ಟ್ರಾನಿಕ್ಸ್, ಸೌರಶಕ್ತಿ ಉತ್ಪಾದನೆ, ಮುಂತಾದ ತಂತ್ರಜ್ಞಾನ ವಿಷಯಗಳೊಂದಿಗೆ ಬೌದ್ಧಿಕ ಮತ್ತು ಕೌಶಲ್ಯಾಭಿವೃದ್ದಿ ವಿಷಯಗಳು, ಐಡಿಯಾ ಜನರೇಶನ್,ಪ್ರಾಜೆಕ್ಟ್ ತಯಾರಿ, ಕರ‍್ಯಕ್ರಮ ನಿರ್ವಹಣೆ, ಕ್ರೀಡೆ, ಯೋಗ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಹಾಗೂ ತರಬೇತಿ ನೀಡಲಾಗುವುದು ಎಂದು ಪ್ರಾಚಾರ್ಯರಾದ ಡಾ. ಅಶೋಕ್ ಕುಮಾರ್‌ತಿಳಿಸಿದರು.

ಇಲೆಕ್ಟ್ರಾನಿಕ್ಸ್‌ವಿಭಾಗದ ಸಹ ಪ್ರಾದ್ಯಾಪಕ ರಾಧಾಕೃಷ್ಣ ಸ್ವಾಗತಿಸಿ, ಕಾರ‍್ಯಕ್ರಮ ಸಂಯೊಜಕ ಮಹೇಶ್‌ವಂದಿಸಿದರು.

Related posts

ಸುಲ್ಕೇರಿ: ಶ್ರೀ ನೇಮಿನಾಥಸ್ವಾಮಿ ಸಭಾಭವನ ಉದ್ಘಾಟನೆ

Suddi Udaya

ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆ ಕಕ್ಯಪದವು ಪದವಿ ವಿಭಾಗದಲ್ಲಿ ನಶಾಮುಕ್ತ ಭಾರತ ಅಭಿಯಾನ ಕುರಿತು ಪ್ರತಿಜ್ಞಾವಿಧಿ ಸ್ವೀಕಾರ

Suddi Udaya

ನಿಡ್ಲೆ: ವಿಶ್ವನಾಥ ಪೂಜಾರಿ ನಿಧನ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಕೊಡಗು ಪ್ರವಾಸ

Suddi Udaya

ಮಿನಿ ವಿಮಾನ ನಿಲ್ದಾಣ: ಧರ್ಮಸ್ಥಳ ನೀರಚಿಲುಮೆ ಬಳಿ ಜಾಗ ಪರಿಶೀಲನೆ ನಡೆಸಿದ ಅಧಿಕಾರಿಗಳು

Suddi Udaya

ಪಾಲಡ್ಕ ಯಕ್ಷಮಿತ್ರ ಯಕ್ಷಗಾನ ಬಯಲಾಟ ಸಮಿತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

Suddi Udaya
error: Content is protected !!