April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅರಸಿನಮಕ್ಕಿಯಲ್ಲಿ ಮಕ್ಕಳ ಸಂಸ್ಕಾರ ಶಿಬಿರ ಸಂಪನ್ನ

ಅರಸಿನಮಕ್ಕಿ : ಸಂಸ್ಕಾರ ಸಿಗದ ಮಕ್ಕಳು ಮನೆಮಂದಿಗೆ ಮಾತ್ರವಲ್ಲದೆ ಸಮಾಜಕ್ಕೂ ಹೊರೆಯಾಗುತ್ತಾರೆ. ಮಕ್ಕಳಿಗೆ ಬಾಲ್ಯದಿಂದಲೆ ಸಂಸ್ಕಾರ ನೀಡಿ ಸಂಸ್ಕೃತಿ, ಪರಂಪರೆಯ ಬಗ್ಗೆ ತಿಳಿಹೇಳಬೇಕು ಎಂದು ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅ.ಪ್ರಾ.ಶಾಲೆಯ ಸಂಚಾಲಕರಾದ ವಾಮನ ತಾಮ್ಹನ್‌ಕರ್ ಹೇಳಿದರು.


ಅವರು ಎ.13 ರಂದು ಅರಸಿನಮಕ್ಕಿಯಲ್ಲಿ ನವ ಭಾರತ ಸಂಘಟನೆಯ ಆಶ್ರಯದಲ್ಲಿ ನಡೆದ ನಾಲ್ಕು ದಿನಗಳ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಶಿಬಿರವನ್ನು ಆಯೋಜಿಸುವಲ್ಲಿ ಶ್ರಮಿಸಿದ ಸಂಘಟನೆಯ ಕಾರ್ಯಕರ್ತರನ್ನು ಶ್ಲಾಘಿಸಿದ ಅವರು ಪ್ರತಿ ತಿಂಗಳು ಇಂತಹ ಕನಿಷ್ಟ ಒಂದು ದಿನದ ಶಿಬಿರವನ್ನು ಮಾಡಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಬೌದ್ಧಿಕ್ ನೀಡಿದ ನಿವೇದಿತಾ ಮಾತಾಜಿಯವರು, ಮಕ್ಕಳು ಮನೆಯಲ್ಲಿರುವ ಹೆತ್ತವರ ನಡವಳಿಕೆಯನ್ನು ಗಮನಿಸುತ್ತಾರೆ, ಅವರನ್ನೇ ಅನುಸರಿಸುತ್ತಾರೆ. ಪೋಷಕರಲ್ಲಿ ಸಂಸ್ಕಾರದ ಕೊರತೆಯಿದ್ದರೆ ಮಕ್ಕಳೂ ಅದೇ ಹಾದಿ ಹಿಡಿಯುತ್ತಾರೆ. ಆದ್ದರಿಂದ ಸಂಸ್ಕಾರ ಮನೆಯಿಂದಲೆ ಸಿಗಬೇಕು. ಸಂಸ್ಕಾರ ದೊರೆತ ಮಗು ಸಮಾಜದ, ದೇಶದ ಆಸ್ತಿಯಾಗುತ್ತದೆ ಎಂದರು.


ಅತಿಥಿಗಳಾಗಿ ಭಾಗವಹಿಸಿದ ವಿಶ್ವ ಹಿಂದು ಪರಿಷತ್‌ನ ಜಿಲ್ಲಾ ಮುಖಂಡ ನವೀನ್ ನೆರಿಯ, ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ, ದಾನಿ ಸುಂದರ ರಾಣ್ಯ ಶುಭಹಾರೈಸಿದರು. ಅರಸಿನಮಕ್ಕಿ ಗ್ರಾ.ಪಂ. ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್. ಅಧ್ಯಕ್ಷತೆ ವಹಿಸಿದ್ದರು. ಶ್ರೀರಂಗ ದಾಮ್ಲೆ, ಆರೆಸ್ಸೆಸ್ ಸ್ವಯಂಸೇವಕ ಯೋಗೀಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಹತ್ಯಡ್ಕ ಗ್ರಾಮದ ಬೂಡುಮುಗೇರಿನ ಅನಾರೋಗ್ಯ ಪೀಡಿತೆ ರತ್ನಾರವರಿಗೆ ಸಂಗ್ರಹಿಸಿ ನೀಡಿದ ಧನಸಹಾಯವನ್ನು ಹಸ್ತಾಂತರಿಸಲಾಯಿತು. ಶಿಬಿರಾರ್ಥಿಗಳು ಅನಿಸಿಕೆ ಹಂಚಿಕೊಂಡರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು.


ಶ್ರೀನಿಧಿ ಜನಸೇವಾಕೇಂದ್ರದ ಮಾಲಕ ಗಣೇಶ್ ಹೊಸ್ತೋಟ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಾಲತಿ ಮಾತಾಜಿ ವಂದಿಸಿದರು. ಸುಮಾ ಸಂಜಯ್ ಮಾತಾಜಿ ಕಾರ್ಯಕ್ರಮ ನಿರ್ವಹಿಸಿದರು. ದಾನಿಗಳು, ನವಭಾರತ ಸಂಘಟನೆಯ ಸದಸ್ಯರು ಸಹಕರಿಸಿದರು.
ಶಿಬಿರದಲ್ಲಿ ಹತ್ಯಡ್ಕ, ಶಿಶಿಲ, ಶಿಬಾಜೆ, ರೆಖ್ಯ ಗ್ರಾಮದ 172 ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related posts

ಬೆಳ್ತಂಗಡಿ ವುಮೆನ್ ಇಂಡಿಯಾ ಮೂವ್ಮೆಂಟ್ ನೂತನ ಕ್ಷೇತ್ರ ಸಮಿತಿ ರಚನೆ

Suddi Udaya

ಮಂಗಳೂರು-ಉಡುಪಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ ಕುಮಾರಚಂದ್ರ ಬೆಳ್ತಂಗಡಿ ನಿಯೋಜನೆ

Suddi Udaya

ಬೆಳ್ತಂಗಡಿ ಧರ್ಮಾಧ್ಯಕ್ಷರಾದ ಲಾರೆನ್ಸ್ ಮುಕ್ಕುಝಿಯವರನ್ನು ಭೇಟಿಯಾದ ಎಸ್‌ಡಿಪಿಐಯ ಜಿಲ್ಲಾ ನಾಯಕರು

Suddi Udaya

ವೇಣೂರು: ಜೀರ್ಣೋದ್ಧಾರಗೊಳಿಸಿದ ತ್ಯಾಗಿಭವನ ಉದ್ಘಾಟನೆ

Suddi Udaya

ಗುರುವಾಯನಕೆರೆಯಲ್ಲಿ ಡಾ. ಸವನ್ ರೈ ಬಾರ್ದಡ್ಕ ಬಳಂಜರವರ ಶ್ರೀ ಹಿತ ಡೆಂಟಲ್ ಝೋನ್ ಶುಭಾರಂಭ

Suddi Udaya

ಬೆಳ್ತಂಗಡಿಯ ಮೂವರ ಸಜೀವ ದಹನ ಪ್ರಕರಣ: ವಿಧಾನ ಪರಿಷತ್ ಸದಸ್ಯರನ್ನು ಭೇಟಿಯಾದ ಎಸ್‌ಡಿಪಿಐ ಮುಖಂಡರ ನಿಯೋಗ

Suddi Udaya
error: Content is protected !!