ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗೇರುಕಟ್ಟೆಯಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ

ಗೇರುಕಟ್ಟೆ: ಕರ್ನಾಟಕ ಯೋಗ ಶಿಕ್ಷಣ ಸಮಿತಿ, ನೇತ್ರಾವತಿ ವಲಯ, ಮಂಗಳೂರು ಇದರ ಸಹಯೋಗದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಗೇರುಕಟ್ಟೆಯ ಕ್ಷೀರಸಂಗಮ ಸಭಾಭವನ ಕಳಿಯ ಶಾಖೆಯಲ್ಲಿ ಆಚರಿಸಲಾಯಿತು.

ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ದೇಶದ ಮತ್ತು ಧರ್ಮದ ರಕ್ಷಣೆಗೆ ಭಾರತೀಯರೆಲ್ಲರೂ ದೃಢಸಂಕಲ್ಪ ಮಾಡಬೇಕೆಂದು ತಿಳಿಸಿ ದೇಶದ ರಕ್ಷಣೆಗಾಗಿ ಅಹರ್ನಿಶಿ ಕಾರ್ಯನಿರ್ವಹಿಸುವ ಯೋಧರ ದೈಹಿಕ ಮತ್ತು ಮಾನಸಿಕ ಸ್ಥಿರತೆಗೆ ಸಾಮೂಹಿಕ ಪ್ರಾರ್ಥನೆಯು ಬಲವನ್ನು ನೀಡುವುದೆಂದರು.

ಕಾರ್ಗಿಲ್ ವಿಜಯ ದಿವಸದ ಹಿನ್ನೆಲೆಯ ಬಗ್ಗೆ ಮಾತನಾಡಿದ ಸತೀಶ್ ನಾಳ ಭಾರತ-ಪಾಕ್ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ನೆಲೆಯೂರಿದ ಪಾಕ್ ಸೈನಿಕರನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಯೋಧರು ತೋರಿದ ಪರಾಕ್ರಮವನ್ನು ತಿಳಿಸಿ ಹುತಾತ್ಮರಾದ ಸೈನಿಕರನ್ನು ಸ್ಮರಿಸುವುದು ನಮ್ಮ ಕರ್ತವ್ಯವೆಂದು ತಿಳಿಸಿದರು.

ಕೇಂದ್ರದ ಸಹ ಶಿಕ್ಷಕ ಸುಕೇಶ, ಸಂಚಾಲಕರಾದ ವಿಜಯ, ವರದಿ ಪ್ರಮುಖ ಕೇಶವ, ಅಶೋಕ, ವಸಂತ, ದಿವಾಕರ, ಮಧುಕರ, ರತ್ನಾಕರ, ಗಣೇಶ್, ಅವಿನಾಶ ಮತ್ತು ಅರುಣ ,ಭಾರತಿ, ಶುಭಮಂಗಳ, ಪದ್ಮಲತಾ, ಧರಿತ್ರಿ ಉಪಸ್ಥಿತರಿದ್ದರು. ಯೋಗ ಬಂಧು ಶಿವಣ್ಣ ವಂದಿಸಿದರು.

Related posts

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಎಕ್ಸೆಲ್ ಪರ್ಬ-2023

Suddi Udaya

ಬೆಳಾಲು ಶ್ರೀ ಧ.ಮಂ.ಅ.ಪ್ರೌ ಶಾಲೆಯಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸಂಸ್ಮರಣ ಕಾರ್ಯಕ್ರಮ

Suddi Udaya

ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಮಂಗಳೂರು: ಅಧ್ಯಕ್ಷರಾಗಿ ಕಿರಣ್‌ ಬುಡ್ಲೆಗುತ್ತು, ಕಾರ್ಯದರ್ಶಿಯಾಗಿ ನವೀನಚಂದ್ರ ಗೌಡ ಭೋಜಾರ

Suddi Udaya

ಉಜಿರೆ ಯುವವಾಹಿನಿ ಸಂಚಲನ ಸಮಿತಿಯ ಅಧ್ಯಕ್ಷರಾಗಿ ರಿತೇಶ್ ರೆಂಜಾಳ ಮತ್ತು ಕಾರ್ಯದರ್ಶಿಯಾಗಿ ಉದಯ ಮಾಚಾರ್ ಆಯ್ಕೆ‌

Suddi Udaya

ನಾರಾವಿ ಕಾಲೇಜಿನಲ್ಲಿ ಉಚಿತ ಫಿಸಿಯೋಥೆರಪಿ ಹಾಗೂ ಹೋಮಿಯೋಪಥಿಕ್ ತಪಸಣಾ ಶಿಬಿರ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನ ಕುಣಿತ ಭಜನಾ ತರಬೇತಿ ಉದ್ಘಾಟನೆ

Suddi Udaya
error: Content is protected !!