ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನಲ್ಲಿ ನಡೆದ ಘಟನೆ: ನದಿಯಲ್ಲಿ ಕಾಲು ಜಾರಿ ಬಿದ್ದು ನಾವೂರಿನ ಯುವಕ ಮನ್ಸೂರ್ ಮೃತ್ಯು

ಬೆಳ್ತಂಗಡಿ : ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬನ್ನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನದಿಗೆ ಬಿದ್ದು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ.

ಕೋಳಿ ಸಾಗಾಣಿಕೆ ವಾಹನದಲ್ಲಿ ದುಡಿಯುತ್ತಿದ್ದ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುದುರು ನಿವಾಸಿ ಮನ್ಸೂರ್ (19) ಎಂಬಾತ ತನ್ನ ಇಬ್ಬರು ಸಹೋದ್ಯೋಗಿಗಳ ಜೊತೆಗೆ ಏ.17 ರಂದು ರಾತ್ರಿ ಟಿ.ನರಸೀಪುರ ತಾಲೂಕಿನ ಬನ್ನೂರು ನಲ್ಲಿ ತಂಗಿದ್ದರು. ಏ.18 ರಂದು ಬೆಳಗ್ಗೆ ಸ್ಥಳೀಯ ಕಾವೇರಿ ನದಿಯಲ್ಲಿ ವಾಹನ ತೊಳೆದು , ಸ್ನಾನ ಮಾಡಲು ತೆರಳಿದ ಸಂದರ್ಭದಲ್ಲಿ ಮನ್ಸೂರ್ ಎಂಬಾತ ನೀರಿನ ಆಳದ ಅರಿವಿಲ್ಲದೆ ಕಾಲು ಜಾರಿ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಬನ್ನೂರು ಪೋಲಿಸರು ತೆರಳಿದ್ದು ತನಿಖೆ ನಡೆಸುತ್ತಿದ್ದಾರೆ.

ಮೃತದೇಹವನ್ನು ಬನ್ನೂರು ತಾಲೂಕು ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು , ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಬಿಟ್ಟುಕೊಡಲಾಗುವುದು ಎಂದು ಬನ್ನೂರು ಪೋಲಿಸರು ತಿಳಿಸಿದ್ದಾರೆ.

ಈತ ನಾವೂರು ಗ್ರಾಮದ ಕುದುರು ನಿವಾಸಿ ಹಮೀದ್ ಮತ್ತು ಮೈಮುನ ದಂಪತಿಗಳ ಪುತ್ರ. ಇವರು ಮೂರು ಮಕ್ಕಳಲ್ಲಿ ಓರ್ವ ಈ ಹಿಂದೆ ಮದ್ದಡ್ಕದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಇದೀಗ ಮನ್ಸೂರ್ ಅಗಲಿಕೆ ಕುಟುಂಬಕ್ಕೆ ಆಘಾತ ಉಂಟಾಗಿದೆ. ಮೃತ ಯುವಕ ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.

Related posts

ಭಜರಂಗದಳ ನಿಷೇಧ ನಿರ್ಧಾರಕ್ಕೆ ಮತದಾನದ ದಿನ ಹಿಂದೂ ಸಮಾಜ ಉತ್ತರ ನೀಡಲಿದೆ: ಹರೀಶ್ ಪೂಂಜ

Suddi Udaya

ಪುದುವೆಟ್ಟಿನ ಮಹಿಳೆ ಪುಣ್ಯಶ್ರೀ ಪುತ್ತೂರು ತಾಯಿ ಮನೆಯಲ್ಲಿ ಬಾವಿಗೆ ಬಿದ್ದು ಮೃತ್ಯು

Suddi Udaya

ಕಾಪಿನಡ್ಕ ಜಿನ್ನಪ್ಪ ಪೂಜಾರಿ ಮರಳಿ ಕಾಂಗ್ರೇಸ್ ಗೆ ಸೇರ್ಪಡೆ

Suddi Udaya

ನಾಳ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಾಲೋಚನೆ ಸಭೆ

Suddi Udaya

ಉಜಿರೆ: ಅನುಗ್ರಹ ಕಾಲೇಜಿನಲ್ಲಿ ಕನ್ನಡ ಸಂವರ್ಧನೆ ಕಾರ್ಯಕ್ರಮ

Suddi Udaya

ಕೆರೆಗೆ ಜಾರಿ ಬಿದ್ದು ಗರ್ಡಾಡಿ ನಿವಾಸಿ ನವ ವಿವಾಹಿತ ಸಾವು

Suddi Udaya
error: Content is protected !!