April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶುಭಾರಂಭ

ಪುತ್ತೂರು ಮುಳಿಯ ಗೋಲ್ಡ್ & ಡೈಮಂಡ್ಸ್ ಮಳಿಗೆ ಲೋಕಾರ್ಪಣೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಅತಿ ದೊಡ್ಡ ಆಭರಣ ಮಳಿಗೆ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಇದರ ನವೀಕೃತ ಮಳಿಗೆಯನ್ನು ಎ.20ರ ರವಿವಾರ ಖ್ಯಾತ ನಟ, ಮುಳಿಯ ಸಂಸ್ಥೆಯ ನೂತನ ರಾಯಭಾರಿ ರಮೇಶ್‌ ಅರವಿಂದ್ ಉದ್ಘಾಟಿಸಿದರು.

ರವಿವಾರ ಬೆಳಗ್ಗೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂದು ಆನಂತರ ದೇವರ ದೀಪದೊಂದಿಗೆ ಮೆರವಣಿಗೆ ಮೂಲಕ ಕೋರ್ಟ್‌ ರಸ್ತೆಯಲ್ಲಿರುವ ಶೋರೂಂಗೆ ಆಗಮಿಸಿದರು.

ಮುಳಿಯ ಸಂಸ್ಥೆಯ ನೂತನ ರಾಯಭಾರಿ ರಮೇಶ್‌ ಅರವಿಂದ್, ಬಲೂನ್ ಹಾರಿಸಿ, ಕರ್ಟನ್ ರೈಸ್‌ ಮಾಡಿದರು. ಬಳಿಕ ದೀಪ ಬೆಳಗಿಸಿ, ವಿದ್ಯುಕ್ತವಾಗಿ ಉದ್ಘಾಟನೆ ಮಾಡಲಾಯಿತು.

1944 ರಲ್ಲಿ ಪ್ರಾರಂಭಗೊಂಡ ಮುಳಿಯ ಜ್ಯುವೆಲ್ಸ್, ಪುತ್ತೂರಿನಲ್ಲಿ 10000 ಚದರ ಅಡಿಯ ವಿಶಾಲ ಶೋರೂಂ ಅನ್ನು ತೆರೆಯಲಾಗಿದೆ. ನಾಲ್ಕು ಅಂತಸ್ತಿ ನಲ್ಲಿ ಚಿನ್ನ, ಬೆಳ್ಳಿ, ವಜ್ರ, ಆಧುನಿಕ ಬ್ರಾಂಡೆಡ್ ವಾಚುಗಳು, ಗಿಫ್ಟ್ ಐಟಂ, ಚಿನ್ನಾಭರಣಗಳ ಕೌಂಟರ್‌ಗಳನ್ನು ಹೊಂದಿರಲಿವೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಎಂಬಂತೆ ಗ್ರಾಹಕರಿಗೆ ಮಳಿಗೆಯಲ್ಲೇ ಉಚಿತ ಊಟ, ಉಪಾಹಾರಗಳನ್ನು ಆರಂಭಿಸಲಾಗಿದೆ.

ಮಧ್ಯಾಹ್ನ 12 ರಿಂದ 2.30 ರ ಒಳಗೆ ಆಭರಣ ಖರೀದಿಗೆ ಬರುವ ಗ್ರಾಹಕರಿಗೆ ಊಟ, ಸಂಜೆ 4 ರಿಂದ 6.30 ರ ಒಳಗೆ ಬರುವವರಿಗೆ ಉಪಾಹಾರ ವ್ಯವಸ್ಥೆ ಇರಲಿದೆ.ಜತೆಗೆ ಮಕ್ಕಳ ಆಟ, ಆರೈಕೆಗೆ ವಿಶೇಷ ಕೊಠಡಿ, ವ್ಯಾಲೆಟ್ ಪಾರ್ಕಿಂಗ್, ವಾಚ್ ಕೌಂಟ ರ್, ಬೆಳ್ಳಿಯ ಆಭರಣಗಳ ಸಿಲ್ವರಿಯ ಕೌಂಟ‌ರ್, ವಜ್ರಾಭರಣ ಅಮೂಲ್ಯ ಕೌಂಟ‌ರ್, ಗೋಲ್ಡ್‌ ಪ್ಯೂರಿಟಿ ಅನಲೈಸರ್ ಹಾಗೂ ಡೈಮಂಡ್ ಡಿಟೆಕ್ಟ‌ರ್ ಟೆಸ್ಟಿಂಗ್ ಮಿಷನ್ ಸೌಲಭ್ಯಗಳಿವೆ.

Related posts

ಗುರುವಾಯನಕೆರೆ ವಿದ್ವತ್ ಪ.ಪೂ. ಕಾಲೇಜಿನಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಮಾಲೋಚನ ಸಭೆ

Suddi Udaya

ರಾಜ್ಯ ಮಟ್ಟದ ಕರಾಟೆ: ಉಜಿರೆ ಅನುಗ್ರಹ ಆಂ.ಮಾ. ಶಾಲೆಯ ಮೊಹಮ್ಮದ್ ರಈಸ್ ರಿಗೆ ಚಿನ್ನದ ಪದಕ

Suddi Udaya

ಸರಕಾರಿ ನೌಕರರ ಜಿಲ್ಲಾ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ: ಹೇಮಚಂದ್ರರಿಗೆ ಪ್ರಥಮ ಸ್ಥಾನ

Suddi Udaya

ಕಣಿಯೂರು ಗ್ರಾಮ ಪಂಚಾಯತ್ ನಲ್ಲಿ ವಿಕಲ ಚೇತನ ವಿಶೇಷ ಗ್ರಾಮ ಸಭೆ

Suddi Udaya

ಉಜಿರೆ : ಅಕ್ರಮ ಮದ್ಯ ಮಾರಾಟ: ವಾಹನ ಸಹಿತ ರೂ. 1.53 ಲಕ್ಷದ ಮದ್ಯ ವಶ

Suddi Udaya

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಘಟಕ : ಮಹಿಳಾ ಪ್ರಕಾರದ ವತಿಯಿಂದ ಮಹಿಳಾ ದಿನಾಚರಣೆಯ ಕಾರ್ಯಕ್ರಮ

Suddi Udaya
error: Content is protected !!