ಮೂಡುಬಿದಿರೆ: ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆ.ಇ.ಇ (ಮೈನ್) ೨೦೨೫ ಅರ್ಹತಾ ಪರೀಕ್ಷೆಯ ಎರಡನೆಯ ಹಂತದ ಫಲಿತಾಂಶ ಪ್ರಕಟಗೊಂಡಿದ್ದು ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅಪ್ರತಿಮ ಸಾಧನೆ ಮಾಡುವ ಮೂಲಕ ಸರ್ವಶ್ರೇಷ್ಠ ಫಲಿತಾಂಶವನ್ನು ತಂದಿದ್ದಾರೆ.
ವಿದ್ಯಾರ್ಥಿಯಾದ ಸಮೃದ್ಧ್ ಎಸ್. ಕುಂದರಗಿ (೯೯.೭೯೦೭೨೦೧), ಅಬ್ದುಲ್ ಜಬ್ಬರ್ (೯೯.೭೨೭೩೪೪೫), ಯಶವಂತ ಬಿ (೯೯.೭೦೨೯೬೮೭), ಸುದೇಶ್ ದತ್ತಾತ್ರೇಯ ಕಿಲ್ಲೇದಾರ್ (೯೯.೬೧೮೮೬೮೭), ನೂತನ ಆರ್. ಗೌಡ (೯೯.೫೯೦೦೦೦೦), ಮಹದೇವ್ ಎಲ್ (೯೯.೫೩೩೧೦೯೩), ಗಣೇಶ್ (೯೯.೫೦೬೨೧೯೮), ಮಿಲಿಂದ್ ವಿನಯಕ್ ಶೇಟ್ (೯೯.೪೪೫೫೬೭೨), ಸೋಮನಗೌಡ ಅಸ್ಕಿ (೯೯.೪೦೩೯೧೭೯), ಪುಷ್ಪಕ್ ಎ. ಆರ್ (೯೯.೨೮೬೨೦೫೨). ಉಜ್ವಲ್ ಬಲ್ಲಾಳ್(೯೯.೨೧೦೪೬೪೭), ಶಶಾಂಕ್ (೯೯.೦೪೩೮೦೦೧). ವಿದ್ಯಾರ್ಥಿಗಳು ವಿಷಯವಾರು ಫಲಿತಾಂಶ ದೊಂದಿಗೆ ಉತ್ತಮ ಸಾಧನೆ ಮಾಡಿದ್ದಾರೆ.
ನ್ಯೂ ವೈಬ್ರೆಂಟ್ ಪಿಯು ಕಾಲೇಜು ಪಿಯು ವಿಜ್ಞಾನ ಶಿಕ್ಷಣದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಅತ್ಯುತ್ತಮ ಪೂರಕ ತರಬೇತಿಯನ್ನು ನೀಡುತ್ತಿದೆ ಎಂಬುವುದಕ್ಕೆ ಈ ಫಲಿತಾಂಶವೇ ಸಾಕ್ಷಿಯಾಗಿದೆ. ಸಂಸ್ಥೆಯು ಆರಂಭದ ವರ್ಷದಿಂದಲೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಫಲಿತಾಂಶ ಗಳಿಸುವ ಮೂಲಕ ಉತ್ತಮ ಶಿಕ್ಷಣವನ್ನ ನೀಡುತ್ತಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ನಿರ್ದೇಶಕರುಗಳು, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.