ಲಾಯಿಲ: ರಾಘವೇಂದ್ರ ಮಠದ ಮೂರನೇ ಬ್ರಹ್ಮ ಕಲಶೋತ್ಸವದ ಪ್ರಥಮ ದಿನದಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಶ್ರೀ ರಾಘವೇಂದ್ರ ಮಠಕ್ಕೆ ಎ.20 ರಂದು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.

ಅವರೊಂದಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ರಾಘವೇಂದ್ರ ಸ್ವಾಮಿಗಳ ಬ್ರಹ್ಮಕಲಶೋತ್ಸವದ ಅಧ್ಯಕ್ಷ ರಕ್ಷಿತ್ ಶಿವರಾಂ, ಪದ್ಮರಾಜ ಆರ್, ಸತ್ಯಜಿತ್ ಸುರತ್ಕಲ್, ರವಿ ಚಿಲಿಂಬಿ ಮುಂತಾದವರು ಭೇಟಿ ಕೊಟ್ಟರು.

ರಾಘವೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೇರಾಜೆ ಅವರು ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಠದ ಪ್ರಧಾನ ಕಾರ್ಯದರ್ಶಿ ವಸಂತ ಸುವರ್ಣ, ಉಪಾಧ್ಯಕ್ಷರಾದ ವಿಶ್ವನಾಥ ನಾಯಕ್, ಕುಶಾಲಪ್ಪ ಗೌಡ, ಮಹಾಬಲ ಶೆಟ್ಟಿ, ನಾರಾಯಣ ಬೇಗೂರು, ಟ್ರಸ್ಟಿಗಳಾದ ಕಷ್ಟಪ್ಪ ಪೂಜಾರಿ, ಸಂಗೀತಾ ಹೆರಾಜೆ, ಸೋಮೇಗೌಡ, ಜಯರಾಮ್ ಬಂಗೇರ, ಉಮೇಶ ಬಂಗೇರ, ಹಾಗೂ ಇತರ ಗಣ್ಯರು ಹಾಜರಿದ್ದರು.