April 22, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎ.28-ಮೇ 3: ಮೊಗ್ರು ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ವತಿಯಿಂದ ಬೇಸಿಗೆ ಶಿಬಿರ ಹಾಗೂ ಯೋಗ ಶಿಬಿರ

ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ (ರಿ) ಮೊಗ್ರು, ಇದರ ವತಿಯಿಂದ ಎಪ್ರಿಲ್28 ರಿಂದ ಮೇ 3 ರ ವರೆಗೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗ್ರು ಇಲ್ಲಿ ಮಕ್ಕಳಿಗೆ ರಜಾಮಜಾ ಬೇಸಿಗೆ ಶಿಬಿರ ಹಾಗೂ ಸಾರ್ವಜನಿಕರಿಗೆ ಯೋಗ ಶಿಬಿರ ಆಯೋಜಿಸಲಾಗಿದೆ.

4 ವರ್ಷದಿಂದ 14 ವರ್ಷದ ಮಕ್ಕಳಿಗೆ ಶಿಬಿರದಲ್ಲಿ ಮನರಂಜನೆ ಆಟಗಳು, ಕೌಶಲ್ಯ ತರಬೇತಿ, ವ್ಯಕ್ತಿತ್ವ ನಿರ್ಮಾಣದ ಕಲೆಗಳು, ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನದ ತರಬೇತಿಯೊಂದಿಗೆ ವಿದ್ಯಾರ್ಥಿಗಳ ಏಕಾಗ್ರತೆ, ಜ್ಞಾಪನಾಶಕ್ತಿ ಹಾಗೂ ಆರೋಗ್ಯವೃದ್ಧಿಗೆ ತರಬೇತಿ ನೀಡಲಾಗುವುದು. ಶಿಬಿರದ 6 ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮ ಭೋದನೆಯ ಅನುಭವಿ ಶಿಕ್ಷಕಿಯರಿಂದ ಇಂಗ್ಲೀಷ್ ಮಾತುಗಾರಿಕೆ ಹಾಗೂ ಬರವಣಿಗೆಯ ತರಬೇತಿಯು ಸಿಗಲಿದೆ. ಶಿಬಿರಾರ್ಥಿಗಳಿಗೆ ಆಕರ್ಷಕ ಉಡುಗೊರೆಯಾಗಿ ಕ್ಯಾಪ್ ಕಿಟ್ ಉಚಿತವಾಗಿ ನೀಡಲಾಗುವುದು.

ನೊಂದಾವಣೆಗೆ ಸಂಪರ್ಕಿಸಿ : 9845588740 \ 9606303907

Related posts

ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಮುಂಡಾಜೆ ಪ.ಪೂ. ಕಾಲೇಜು ವಿದ್ಯಾರ್ಥಿ ಕೆ.ಎನ್. ಧನುಷ್ ಆಯ್ಕೆ

Suddi Udaya

ಹೊಸಂಗಡಿಯಲ್ಲಿ ಬೆಂಡೆ ಬೆಳೆಯಲ್ಲಿ ಸಮಗ್ರ ಬೆಳೆ ನಿರ್ವಹಣೆ ತರಬೇತಿ ಕಾರ್ಯಕ್ರಮ

Suddi Udaya

ನಡ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಕೊಯ್ಯೂರು ಗ್ರಾಮ ಪಂಚಾಯತ್ ನ ದ್ವಿತೀಯ ಹಂತದ ಗ್ರಾಮಸಭೆ

Suddi Udaya

ಪಟ್ರಮೆ: ಶಾಂತಿಕಾಯ ಬಳಿ ಬರೆ ಕುಸಿತ: ರಸ್ತೆಗೆ ಉರುಳಿ ಬಿದ್ದ ಮರ

Suddi Udaya

ಎಸ್.ಡಿ.ಎಮ್. ಪದವಿ ಪೂರ್ವ ಕಾಲೇಜಿನಲ್ಲಿ ವೈದ್ಯರ ದಿನಾಚರಣೆ

Suddi Udaya
error: Content is protected !!