September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕೊರಂಜ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಮೆಟ್ರಿಕ್ ಮೇಳ

ಗೇರುಕಟ್ಟೆ: ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ, ಕೊರಂಜದಲ್ಲಿ ಮೆಟ್ರಿಕ್ ಮೇಳವು ವಿದ್ಯಾರ್ಥಿಗಳ ಸೃಜನಶೀಲತೆ, ವೈಜ್ಞಾನಿಕ ಮನೋಭಾವ ಹಾಗೂ ಸಾಮಾಜಿಕ ಅರಿವನ್ನು ಪ್ರದರ್ಶಿಸುವ ಯಶಸ್ವಿ ವೇದಿಕೆಯಾಗಿತು.

ಉದ್ಘಾಟನೆಯನ್ನು, ದೀಪ ಪ್ರಜ್ವಲನದೊಂದಿಗೆ ವಿಶಿಷ್ಟವಾಗಿ ಕಳಸೆಯ ಮೇಲೆ ಸ್ಥಾಪಿಸಿದ ತೆಂಗಿನ ಸಿಂಗಾರ ಬಿಡಿಸುವ ಮೂಲಕ ಕಡಬ ತಾಲೂಕಿನ ಗ್ರಾಮ ಆಡಳಿತಾಧಿಕಾರಿ, ಶಾಲೆಯ ಹಿರಿಯ ವಿದ್ಯಾರ್ಥಿ ದಿನೇಶ್ ಕೆಳಗಿನ ಬೆಟ್ಟು, ಹಾಗೂ ರಂಜನ್ ಕೆಳಗಿನ ಬೆಟ್ಟು ನೆರವೇರಿಸಿದರು.

ಗೇರುಕಟ್ಟೆ ಸ್ನೇಹ ಸಂಗಮ ಆಟೋ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ವಿದ್ಯಾರ್ಥಿಗಳ ವ್ಯವಹಾರ ಸಂವಹನ, ಚಾತುರ್ಯವನ್ನು ಮೆಚ್ಚುಗೆ ವ್ಯಕ್ತ ಪಡಿಸಿದರು. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ವ್ಯವಹರಿಸಿದ ರೀತಿಗೆ ಪೋಷಕರು ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು. ಇಂತಹ ಮೇಳಗಳು ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅತಿಥಿಗಳು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಬೇಕರಿ ತಿಂಡಿಗಳು, ಸೊಪ್ಪು ತರಕಾರಿ, ಕಬ್ಬು, ಜ್ಯೂಸ್ ಗಳು, ಮಾವು, ಹಣ್ಣುಹಂಪಲುಗಳು, ಚಾಟ್ ಐಟಮ್ ಗಳು, ಅದೃಷ್ಟದಾಟಗಳು, ಹೂವಿನ ಗಿಡಗಳು, ಇತ್ಯಾದಿ ವಸ್ತುಗಳ ಮಾರಾಟದಿಂದ ವಿದ್ಯಾರ್ಥಿಗಳು ಲಾಭ ಪಡೆದು ಸಂತಸದಿಂದ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಬೆಳೆದ ಎಳನೀರಿನ ಏಲಂ ಕಾರ್ಯಕ್ರಮವನ್ನು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಬಿ ನಡೆಸಿಕೊಟ್ಟರು. ಸಂಗ್ರಹವಾದ ಮೊತ್ತವನ್ನು ಶಾಲಾಭಿವೃದ್ಧಿಗೆ ಬಳಸಲಾಗುವುದು ಎಂದು ತಿಳಿಸಿದರು. ಸಹಶಿಕ್ಷಕಿ ಶ್ರೀಮತಿ ಅನುರಾಧಾ ಸ್ವಾಗತಿಸಿ, ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಶಾಂತಾ ಧನ್ಯವಾದವನ್ನಿತ್ತರು. ಸಹಶಿಕ್ಷಕಿ ಶ್ರೀವಿದ್ಯಾ ಕಾರ್ಯಕ್ರಮ ಸಂಯೋಜಿಸಿದರು. ಶಾಲಾ ಎಸ್. ಡಿ . ಎಂ. ಸಿ ಸದಸ್ಯರು, ಶಿಕ್ಷಕ ವರ್ಗ, ಅಡಿಗೆ ಸಿಬ್ಬಂದಿ ಮೇಳದ ಯಶಸ್ಸಿಗೆ ಸಹಕರಿಸಿದರು.

Related posts

ಕಾಶಿಪಟ್ಣ ಕೇಳದಪೇಟೆ ಮಸೀದಿಗೆ ಖಾಝಿಯಾಗಿ ತ್ವಾಖಾ ಉಸ್ತಾದ್ ಅಧಿಕಾರ ಸ್ವೀಕಾರ

Suddi Udaya

ಶ್ರೀ ದುರ್ಗಾ ಟೆಕ್ಸ್ ಟೈಲ್ ನಲ್ಲಿ ಮಾನ್ಸೂನ್ ದರ ಕಡಿತ ಮಾರಾಟ,10% ರಿಂದ 50% ಡಿಸ್ಕೌಂಟ್ ಸೇಲ್

Suddi Udaya

ಬೆಳ್ತಂಗಡಿ: ವಿಶ್ವಕರ್ಮ ಸಮಾಜದ ಕಮ್ಮಾರರ ಗುಡಿ ಕೈಗಾರಿಕಾ ಸಂಘದ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ

Suddi Udaya

ಹೊಸಂಗಡಿಯ ಪುಲಾಬೆಯಲ್ಲಿ ಬದ್ರಿಯಾ ಮಸ್ಜಿದ್ ಮತ್ತು ಮದರಸ ಉದ್ಘಾಟನೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

Suddi Udaya

ಉಜಿರೆ ಶ್ರೀ. ಧ. ಮಂ ಆಂ.ಮಾ.(ಸಿ.ಬಿ.ಎಸ್.ಇ) ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Suddi Udaya
error: Content is protected !!