
ತಣ್ಣೀರುಪಂತ : ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ, ಮಹಿಳಾ ಬಿಲ್ಲವ ವೇದಿಕೆ, ಯುವ ಬಿಲ್ಲವ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ 11ನೇ ವರ್ಷದ ಗುರುಪೂಜೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಎ.20 ರಂದು ತಣ್ಣೀರುಪಂತ ಶ್ರೀ ಶಾರದಾಂಬ ಭಜನಾ ಮಂದಿರ ವಠಾರದಲ್ಲಿ ನಡೆಯಿತು.
ನೂತನ ಪದಾಧಿಕರಿಗಳ ಪದಗ್ರಹಣ: ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಯೋಗೀಶ್ ಪೂಜಾರಿ ಅಳಕ್ಕೆ, ಕಾರ್ಯದರ್ಶಿಯಾಗಿ ಕಿಶೋರ್ ಅಳಕ್ಕೆ, ಉಪಾಧ್ಯಕ್ಷರಾಗಿ ತನಿಯಪ್ಪ ಪೂಜಾರಿ ಕರಂಗೀಲು, ಯುವ ಬಿಲ್ಲವ ವೇದಿಕೆ ಅಧ್ಯಕ್ಷರಾಗಿ ಸುಶಾಂತ್ ಅಳಕ್ಕೆ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷರಾಗಿ ಅಶ್ವಿತಾ ರಂಜಿತ್, ಕಾರ್ಯದರ್ಶಿಯಾಗಿ ಪ್ರಿಯಾ ಹಾಗೂ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನಡೆಯಿತು.
ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ತಣ್ಣೀರುಪಂತ ಪ್ಯಾಕ್ಸ್ ಅಧ್ಯಕ್ಷ ಜಯಾನಂದ ಕಲ್ಲಾಪು, ಬಿಜೆಪಿ ಬೆಳ್ತಂಗಡಿ ಮಂಡಲ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಬೆಳ್ತಂಗಡಿ ಶ್ರೀ ಗು.ವಿ.ಸ.ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಅಶ್ವಥ್ ಕುಮಾರ್, ಬೆಳ್ತಂಗಡಿ ಶ್ರೀ.ಗು.ನಾ.ಸ್ವಾ.ಸೇ.ಸಂಘ ನಿರ್ದೇಶಕಿ ಉಷಾ ಶರತ್, ಮಚ್ಚಿನ ಬ್ರಹ್ಮಶ್ರೀ ನಾ.ಗು.ಸೇ. ಸಂಘ ಅಧ್ಯಕ್ಷ ಗೋಪಾಲ ಪೂಜಾರಿ, ಸಂಘದ ಅಧ್ಯಕ್ಷ ಬಾಲಕೃಷ್ಣ ಅಳಕ್ಕೆ, ಉಪಾಧ್ಯಕ್ಷ ಉಮೇಶ್ ಕಟ್ಟಾಜೆ, ಕಾರ್ಯದರ್ಶಿ ಯಶೊಧರ್ ಅಳಕ್ಕೆ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಲೋಕೇಶ್ ಅಳಕ್ಕೆ, ಕಾರ್ಯದರ್ಶಿ ಪ್ರಜತ್ ಬಟ್ಟಂಡ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಮಮತಾ ಯೋಗೀಶ್, ಕಾರ್ಯದರ್ಶಿ ಸುಮಿತ್ರಾ ಧರ್ಣಪ್ಪ ಸಹಿತ ಮೊದಲಾದವರು ಉಪಸ್ಥಿತರಿದ್ದರು.