32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳಾಲು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಿಬ್ಬಂದಿಗಳಿಬ್ಬರಿಂದ ಸಂಘದ ಲಕ್ಷಾಂತರ ಹಣ ದುರುಪಯೋಗ ಬೆಳಕಿಗೆ

ಬೆಳ್ತಂಗಡಿ : ಬೆಳಾಲು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಇಬ್ಬರು ಸಿಬ್ಬಂದಿಗಳು ಸಂಘದ ಲಕ್ಷಾಂತರ ಹಣ ದುರುಪಯೋಗ ಮಾಡಿರುವುದು ಬೆಳಕಿಗೆ ಬಂದಿದ್ದು, ಇದರ ಬಗ್ಗೆ ಇಲಾಖೆಯ ವತಿಯಿಂದ ತನಿಖೆ ಆರಂಭಗೊಂಡಿದೆ.

ಸಂಘದ ಇಬ್ಬರು ಸಿಬ್ಬಂದಿಗಳು ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದು, ವರ್ಷದ ಆಡಿಟ್ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆನ್ನಲಾಗಿದೆ.


ಸಂಘದ ಮ್ಯಾನೇಜರ್ ನಾರಾಯಣ ಗೌಡರಿಗೆ ಸಿಬ್ಬಂದಿಗಳು ಮಾಡಿರುವ ಈ ಅವ್ಯವಹಾರದ ಯಾವುದೇ ಮಾಹಿತಿ ಇರಲಿಲ್ಲ. ವಾರ್ಷಿಕ ಲೆಕ್ಕ ಪತ್ರ ಪರಿಶೋಧನೆಯಲ್ಲಿ ಅಧ್ಯಕ್ಷ ಹೆಚ್. ಪದ್ಮ ಗೌಡರಿಗೆ ಹಣ ದುರುಪಯೋಗ ಪಡಿಸಿರುವ ಪ್ರಕರಣ ಗೊತ್ತಾಗಿದ್ದು, ಆಂತರಿಕ ತನಿಖೆ ನಡೆಸಿದಾಗ ಸಂಘದ ಸಿಬ್ಬಂದಿಗಳಾದ ಪ್ರಶಾಂತ್ ಮತ್ತು ಸದಾಶಿವ @ ಸುಜಿತ್ ಎಂಬ ಇಬ್ಬರು ಸೇರಿಕೊಂಡು ಹಣ ದುರುಪಯೋಗ ಮಾಡಿರುವ ಆರೋಪಕ್ಕೆ ಒಳಗಾಗಿದ್ದು, ಅವರು ಇದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಇದರಲ್ಲಿ ಅರ್ಧದಷ್ಟು ಹಣವನ್ನು ಸಂಘಕ್ಕೆ ವಾಪಾಸು ಕಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.


ತನಿಖೆ ನಡೆಯುತ್ತಿದೆ: ಹೆಚ್.ಪದ್ಮಗೌಡ
ಪ್ರಕರಣದ ಬಗ್ಗೆ ಸಂಘದ ಅಧ್ಯಕ್ಷ ಹೆಚ್. ಪದ್ಮಗೌಡ ಅವರನ್ನು ‘ಸುದ್ದಿ ಉದಯ’ ಕರೆ ಮಾಡಿ ಸಂಪರ್ಕಿಸಿದಾಗ, ಮಾಹಿತಿ ನೀಡಿದ ಅಧ್ಯಕ್ಷರು ಸಂಘದಲ್ಲಿ ನಿರ್ದಿಷ್ಟವಾಗಿ ಎಷ್ಟು ಹಣ ಅವ್ಯವಹಾರವಾಗಿದೆ ಎಂದು ಗೊತ್ತಾಗಿಲ್ಲ, ಇದರ ತನಿಖೆ ನಡೆಯುತ್ತಿದ್ದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ರಬ್ಬರ್ ವ್ಯವಹಾರದಲ್ಲಿ ವ್ಯತ್ಯಾಸವಾಗಿರುವುದು ಕಂಡು ಬಂದಿದೆ. ಇಬ್ಬರು ಸಿಬ್ಬಂದಿಗಳು ಹಣ ದುರುಪಯೋಗ ಮಾಡಿದ್ದು, ಇದನ್ನು ಒಪ್ಪಿಕೊಂಡಿದ್ದಾರೆ ಕೂಡಲೇ ನಷ್ಟ ಭರ್ತಿ ಮಾಡುತ್ತೇವೆ ಎಂದು ಸ್ವಷ್ಟಪಡಿಸಿದ್ದಾರೆ.

Related posts

ಲಾಯಿಲ: ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಡೈಮಂಡ್ ಫೆಸ್ಟ್ ಲಕ್ಕಿ ಕೂಪನ್ ನಲ್ಲಿ ವಿಜೇತರರಾದ ಶಿರ್ಲಾಲುವಿನ ಆಶಾ ಹಾಗೂ ಪ್ರಭಾಕರ್ ರವರಿಗೆ ಕಾರು ಕೀ ಹಸ್ತಾಂತರ

Suddi Udaya

ಪಿಲಿಗೂಡು ಶಾಲಾ ವಾರ್ಷಿಕೋತ್ಸವ, ವಿವೇಕ ಕೊಠಡಿ ಮತ್ತು ರಂಗಮಂದಿರ ಉದ್ಘಾಟನೆ

Suddi Udaya

ಉಜಿರೆ: ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘದ ಕ್ಷೇಮ ನಿಧಿಯ 11ನೇ ಸಹಾಯಧನ ಹಸ್ತಾಂತರ

Suddi Udaya

ಕಲ್ಮಂಜ ಪ್ರೌಢಶಾಲಾ ವಿದ್ಯಾರ್ಥಿಗಳು ಯೋಗಾಸನದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya
error: Content is protected !!