ಬೆಳ್ತಂಗಡಿ: ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ನೇತೃತ್ವದ ಕೇಂದ್ರ ಸರ್ಕಾರ ಭಾರತದ ಕಿರೀಟವೆನಿಸಿದ ಶಾರದೆಯ ನೆಲೆಬೀಡಾದ ಜಮ್ಮು-ಕಾಶ್ಮೀರವನ್ನು ಸಂರಕ್ಷಿಸಿ ಆರ್ಟಿಕಲ್ 370 ರದ್ದುಗೊಳಿಸುವ ಮತ್ತು ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯಲು ತೆಗೆದುಕೊಂಡ ದಿಟ್ಟ ಕ್ರಮದ ಪರಿಣಾಮ ಜಮ್ಮು ಕಾಶ್ಮೀರ ಸಾಮಾನ್ಯ ಸ್ಥಿತಿಗೆ ಬಂದಿರೋದರಿಂದ ಉಗ್ರರು ಅತೀವ ಹತಾಶೆಗೊಂಡಿದ್ದು ಮುಗ್ಧ ಪ್ರವಾಸಿಗರನ್ನು ಹತ್ಯೆಗೈಯ್ಯುವ ಮೂಲಕ ತಮ್ಮ ಹೇಡಿತನವನ್ನು ಪ್ರದರ್ಶಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಹೇಳಿದ್ದಾರೆ.
ಈ ಹೇಡಿತನದ ಉಗ್ರರ ದಾಳಿಗೆ ಬಲಿಯಾಗಿರುವವರ ಸಾವು ಅತ್ಯಂತ ನೋವು ತಂದಿದೆ. ಮೃತರ ಕುಟುಂಬಗಳಿಗೆ ಈ ದಾರುಣ ಘಟನೆಯ ಆಘಾತ ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತನು ಕರುಣಿಸಲಿ, ಮುಂದಿನ ದಿನಗಳಲ್ಲಿ ಇಂತಹ ಹತಾಶ ಉಗ್ರರ ರಣಹೇಡಿ ಕೃತ್ಯಗಳು ಮರುಕಳಿಸದಂತೆ ಕೇಂದ್ರ ಸರ್ಕಾರದಿಂದ ಉಗ್ರರಿಗೆ ಸಂದೇಶ ರವಾನೆಯಾಗಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.











