27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ವತಿಯಿಂದ ಖಂಡನೆ

ಬೆಳ್ತಂಗಡಿ.ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ವತಿಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಬೆಳ್ತಂಗಡಿ ಮೂರು ಮಾರ್ಗದ ಧ್ವಜ ಕಟ್ಟೆ ಬಳಿ ಮೊಂಬತ್ತಿ ಬೆಳಗಿಸಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿ ಘಟನೆಯನ್ನು ತೀವ್ರವಾಗಿ ಖಂಡಿಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಕೇಶವ ಪಿ ಬೆಳಾಲು, ಉಭಯ ಬ್ಲಾಕ್ ಅಧ್ಯಕ್ಷರುಗಳಾದ ಸತೀಶ್ ಕೆ ಕಾಶಿಪಟ್ಟಣ, ನಾಗೇಶ್ ಕುಮಾರ್ ಗೌಡ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಸಾಲಿಯನ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಶೇಖರ ಕುಕ್ಕೆಡಿ, ಜಿಲ್ಲಾ ಕೆಡಿಪಿ ಸದಸ್ಯರದ ಸಂತೋಷ್ ಕುಮಾರ್ ಲಾಯಿಲ
ನಗರ ಪಂಚಾಯತ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಜಗದೀಶ್ ಡಿ, ಯುವ ಕಾಂಗ್ರೆಸ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಹಕ್ಕಿಮ್ ಕೊಕ್ಕಡ , ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಭಿನಂದನ ಹರೀಶ್ ಕುಮಾರ್, ಯುವ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ಅಝರ್ ನಾವೂರು, ಉಪಾಧ್ಯಕ್ಷರಾದ ನವೀನ್ ಗೌಡ ಸವನಾಲು, ಅರುಣ್ ಲೋಬೋ, ಪಕ್ಷದ ಪ್ರಮುಖರಾದ ತಂಗಚ್ಚನ್ ಧರ್ಮಸ್ಥಳ, ಹರೀಶ್ ಸುವರ್ಣ ಕನ್ಯಾಡಿ, ಅರುಣ್ ಮತ್ತಿಲ್ಲ ಧರ್ಮಸ್ಥಳ, ಸಚಿನ್ ಕುಮಾರ್ ನೂಜೋಡಿ, ಪ್ರವೀಣ್ ಹಳ್ಳಿಮನೆ ಸೂರ್ಯನಾರಾಯಣ ಡಿಕೆ , ಜೀನತ್ ಉಜಿರೆ, ಉಮೈರ ಬಾನು, ಪ್ರವೀಣ್ ಪಿಂಟೋ ಪೆರಾಡಿ, ಪ್ರಮೋದ್ ಕುಮಾರ್ ಮೆಚ್ಚಿನ, ಸುಧೀರ್ ಶೆಟ್ಟಿ ಮಚ್ಚಿನ, ನಾರಾಯಣ ಪೂಜಾರಿ ಮಚ್ಚಿನ, ಸದಾಶಿವ ಹೆಗಡೆ ಮೆಚ್ಚಿನ, ಇಲಿಯಾಸ್ ಜಿಲಿಂಬಿ, ಪ್ರಜ್ವಲ್ ಜೈನ್ ಅಳದಂಗಡಿ, ಧನಂಜಯ್ ರಾವ್, ದಿನೇಶ್ ಮೂಲ್ಯ ಕೊಂಡೆ ಮಾರ್, ಕುಶಾಲಪ್ಪ ಗೌಡ, ರವೀಂದ್ರ ಬಿ ಅಮೀನ್ ಪುರಂದರ ಪೆರಾಜೆ, ಅಶ್ವಿನ್ ಬಳೆಂಜ, ಜನಾರ್ಧನ್ ಬೆಳ್ತಂಗಡಿ, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿರಿದ್ದರು

Related posts

ಬೆಳ್ತಂಗಡಿ ಖಾಸಗಿ ರಸ್ತೆಗೆ ಅಡ್ಡಲಾಗಿ ಇಟ್ಟ ಕಾರು ಮಹಿಳೆಯಿಂದ ಕಾರು ಮಾಲಿಕನಿಗೆ ಹಿಗ್ಗ ಮುಗ್ಗ ಕ್ಲಾಸ್

Suddi Udaya

ನಿಡ್ಲೆ: ಶ್ರೀ ದುರ್ಗಾ ಆಟೋ ವರ್ಕ್ಸ್ ನಲ್ಲಿ ಆಯುಧ ಪೂಜೆ

Suddi Udaya

ಉಜಿರೆ: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ವಿಭಾಗದಿಂದ ಅಂತರಾಷ್ಟ್ರೀ ಯ ವಿಚಾರ ಸಂಕಿರಣ

Suddi Udaya

ಪುತ್ತೂರು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಹಾಗೂ ಕಾಮ್‍ಸ್ಕೋಪ್ ಇವರ ಸಿಎಸ್ಆರ್ ನಿಧಿಯ ಪ್ರಾಯೋಜಕತ್ವದಲ್ಲಿ ಬಳಂಜ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಬ್ಯಾಗ್ ವಿತರಣೆ

Suddi Udaya

ಚಾರ್ಮಾಡಿ: ಪ್ರಪಾತಕ್ಕೆ ಉರುಳಿ ಬಿದ್ದ ಟಾಟಾ ಎ.ಸಿ ವಾಹನ: ಚಾಲಕ ಪ್ರಾಣಾಪಾಯದಿಂದ ಪಾರು

Suddi Udaya

ಯುವವಾಹಿನಿ ಅಂತ‌ರ್ ಘಟಕ ಕುಣಿತ ಭಜನಾ ಸ್ಪರ್ಧೆ: ಬೆಳ್ತಂಗಡಿ ಯುವವಾಹಿನಿ ಘಟಕಕ್ಕೆ ದ್ವಿತೀಯ ಸ್ಥಾನ

Suddi Udaya
error: Content is protected !!