April 26, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ: ಬಿ.ಸಿ.ರೋಡಿನಿಂದ ದೇವರ ಆಭರಣ, ಉತ್ಸವ ಮೂರ್ತಿ ಮೆರವಣಿಗೆ

ತೆಕ್ಕಾರು ಭಟ್ರಬೈಲು ದೇವರಗುಡ್ಡ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ದೇವರ ಆಭರಣ, ಉತ್ಸವ ಮೂರ್ತಿಯನ್ನು ಬಿ.ಸಿ.ರೋಡಿನ ಶ್ರೀ ರಕೇಶ್ವರೀ ದೇವಿ ಸನ್ನಿಧಿಯ ಬಳಿಯಿಂದ ತೆಕ್ಕಾರು ದೇವಸ್ಥಾನಕ್ಕೆ ಸಾಗಿಸಲಾಯಿತು. ಶ್ರೀ ರಕೇಶ್ವರೀ ಸನ್ನಿಧಿಯ ಅರ್ಚಕ ರಘುಪತಿ ಭಟ್ ಅವರು ಪ್ರಾರ್ಥನೆ ಸಲ್ಲಿಸಿದರು.

ಮಾಜಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಶ್ರೀ ರಕೇಶ್ವರೀ ಸನ್ನಿಧಿ ಸೇವಾ ಸಮಿತಿ ಅಧ್ಯಕ್ಷ ವಿಶ್ವನಾಥ್ ಬಿ, ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ಅಧ್ಯಕ್ಷ ಸಂಪತ್‌ಕುಮಾ‌ರ್ ಶೆಟ್ಟಿ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷೆ ಜಯಂತಿ ಪೂಜಾರಿ, ವೆಂಕಪ್ಪ ಪೂಜಾರಿ, ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸೇವಾ ಟ್ರಸ್ಟ್ ಸಂಚಾಲಕ ಲಕ್ಷಣ್ ಭಟ್ರಬೈಲು, ಕಾರ್ಯದರ್ಶಿ ಮಂಜುನಾಥ ಸಾಲ್ಯಾನ್ ಬಡೆಗ್ರಾಮ, ಕೋಶಾಧಿಕಾರಿ ಸುರೇಶ್ ಪಿ.ಪುಳಿತ್ತಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ತುಕರಾಮ್ ನಾಯಕ್ ಬಿ, ಉಪಾಧ್ಯಕ್ಷ ತುಳಸೀಧರ ಬೇನೆಪ್ಪು, ಸದಸ್ಯ ಶರತ್ ಆನಲೆ ಉಪಸ್ಥಿತರಿದ್ದರು.

ವಿವಿಧ ವಾಹನಗಳ ಮೂಲಕ ನೂರಾರು ಭಕ್ತರು ಪಾಲ್ಗೊಂಡಿದ್ದರು.

Related posts

ಗುಂಡೂರಿ ವಿಪರಿತ ಮಳೆಗೆ ಗುಡ್ಡ ಕುಸಿತ

Suddi Udaya

ರಾಜ್ಯಮಟ್ಟದ ಕ್ರೀಡಾಕೂಟ: ಮುಂಡಾಜೆ ಸರಸ್ವತಿ ಶಾಲಾ ವಿದ್ಯಾರ್ಥಿ ಜೀವಿತ ಬಿ.ಎಸ್ ಕುಮಿಟಿ ಮತ್ತು ಕಟದಲ್ಲಿ ದ್ವಿತೀಯ ಸ್ಥಾನ

Suddi Udaya

ದೇವಾಂಗ ಸಮಾಜ ಮುಂಡಾಜೆ ಘಟಕದ ತ್ರೈಮಾಸಿಕ ಸಭೆ

Suddi Udaya

ಕೊಕ್ಕಡ ಶ್ರೀ ಕ್ಷೇತ್ರ ವೈದ್ಯನಾಥೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya

ಬೆನಕ ರಜತ ಸಂಭ್ರಮ ಲಾಂಛನ ಅನಾವರಣ

Suddi Udaya

ಎಸ್.ಡಿ.ಪಿ.ಐ ಕುವೆಟ್ಟು ಬ್ಲಾಕ್ ಸಮಿತಿ ವತಿಯಿಂದ ರಸ್ತೆ ದುರಸ್ಥಿಗೆ ಆಗ್ರಹಿಸಿ ಪ್ರತಿಭಟನೆ

Suddi Udaya
error: Content is protected !!