ಕಾಶಿಪಟ್ಣ: ತಂಡವೊಂದು ಮನೆಯಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ ಎ.24ರಂದು ರಾತ್ರಿ ಕಾಶಿಪಟ್ಣ ಗ್ರಾಮದ ಮಿತ್ತೊಟ್ಟು ಎಂಬಲ್ಲಿ ಸಂಭವಿಸಿದೆ.
ಎ. 24 ರಂದು ರಾತ್ರಿ 10ಕ್ಕೆ ಕಾಶಿಪಟ್ಣ ಗ್ರಾಮದ ಮಿತ್ತೋಟ್ಟುಯ ಧರ್ಣಪ್ಪ ಪೂಜಾರಿ ಎಂಬವರ ಮನೆಯ ಬಳಿ ಬಂದು ಅವರ ಪುತ್ರ ಅಭಿಷೇಕ್‌ನನ್ನು ಮೊಬೈಲ್ ಕರೆ ಮಾಡಿ ಮನೆಯ ಬಳಿ ರಸ್ತೆಗೆ ಕರೆದು ಇನ್ ವರ್ಟರ್ ತೆಗೆದುಕೊಂಡು ಬಾ ಎಂದು ಅವಾಚ್ಯ ಶಬ್ದಗಳಿಂದ ಬೈದಾಗ ಇವರೊಳಗೆ ಮಾತಿನ ಚಕಮಕಿ ನಡೆದಿದ್ದು, ಆ ಸಮಯ ಧರ್ಣಪ್ಪ ಪೂಜಾರಿಯವರು ಅಭಿಷೇಕ್‌ನನ್ನು ಮನೆಗೆ ಕರೆದುಕೊಂಡು ಬರುವ ಸಮಯ ಅವರ ಮನೆಯಂಗಳಕ್ಕೆ ಅಕ್ರಮ ಪ್ರವೇಶಮಾಡಿ, ಜಗ್ಗು @ ಜಗದೀಶ್ ಎಂಬಾತ ಧರ್ಣಪ್ಪ ಪೂಜಾರಿಯವರಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು, ಅವರ ಪುತ್ರ ಅಭಿಷೇಕ್‌ಗೆ ಸುಜಿತ್, ಆಕಾಶ್, ಸವಿನ್, ಸಂಜಯ್‌ಸೇರಿ ಕೈಯಿಂದ ಹಲ್ಲೆ ನಡೆಸಿದ್ದಾರೆ.
ಅಲ್ಲದೆ ಆ ಸಮಯ ಮನೆಯಲಿದ್ದ ಧರ್ಣಪ್ಪ ಪೂಜಾರಿಯವರ ದೊಡ್ಡ ಮಗ ಅನಿಲ್, ಮಗಳು ಆಶಾ, ಮತ್ತು ಪತ್ನಿ ಬೇಬಿರವರಿಗೂ ಅವರು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿ ಒಡ್ಡಿರುವುದಾಗಿ ಧರ್ಣಪ್ಪ ಪೂಜಾರಿಯವರು ವೇಣೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.