ಬೆಳ್ತಂಗಡಿ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಡಿಕೆಎಂಯುಎಲ್) ಆಡಳಿತ ಮಂಡಳಿಗೆ ಏ.26ರಂದು ಚುನಾವಣೆ ನಡೆಯಲಿದ್ದು ಸಹಕಾರ ಭಾರತಿ ವತಿಯಿಂದ ಅಂಡಿಂಜೆ ಮಹಾಶಕ್ತಿ ಕೇಂದ್ರದಲ್ಲಿ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಅಭ್ಯರ್ಥಿ ಕೆ.ಚಂದ್ರಶೇಖರ ರಾವ್, ಎಸ್ ಬಿ.ಜಯರಾಮ್ ರೈ, ಹೆಚ್.ಪ್ರಭಾಕರ್, ಭರತ್ ಎನ್ ,ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಮಂಡಲ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಪ್ರಮುಖರಾದ ನೇಮಯ್ಯ ಕುಲಾಲ್, ಮೋಹನ್ ಅಂಡಿಂಜೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.