April 25, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಹಲ್ಗಾಮ್ ಪೈಶಾಚಿಕ ಕೃತ್ಯ ಹೇಯ ಮತ್ತು ಖಂಡನೀಯ : ನಿವೃತ್ತ ಎಸ್ಪಿ ಪೀತಾಂಬರ ಹೆರಾಜೆ

ಬೆಳ್ತಂಗಡಿ:ಬಲಿಷ್ಠ ಭಾರತದ ರಕ್ಷಣಪಡೆಗೆ ಸವಲಾಗಿ ನಿಂತಿರುವ ಪಹಲ್ಗಾ ಪೈಶಾಚಿಕ ಕೃತ್ಯ ಹೇಯ ಮತ್ತು ಖಂಡನೀಯ. 28 ಅಮಾಯಕರನ್ನು ಗುಂಡಿಕ್ಕಿ ಕೊಂದು ಕ್ರೌರ್ಯ ಮೆರೆದ ಉಗ್ರಗಾಮಿಗಳಿಗೆ ಮತ್ತು ಅದರ ಹಿಂದಿರುವ ಶಕ್ತಿಗಳಿಗೆ ಶಾಪ ಮತ್ತು ಖಂಡನೆ ಇರಲಿ ಎಂದು ನಿವೃತ್ತ ಎಸ್ಪಿ ಪೀತಾಂಬರ ಹೆರಾಜೆ ತಿಳಿಸಿದ್ದಾರೆ.


ಇಂತಹ ಘಟನೆಗಳು ಚುನಾವಣಾ ಪೂರ್ವದಲ್ಲಿ ಘಟಿಸಲು ಕಾರಣವೇನು ಕೆಲವೇ ಜನ ಉಗ್ರರು ರಾಷ್ಟ್ರದ ಸುಂದರ ತಾಣಗಳಿಗೆ ದೇಶ ವಿದೇಶಗಳಿಂದ ಬರುವ ಯಾತ್ರಿಗಳನ್ನು ಗುರಿಯಾಗಿಸಿ ಹತ್ಯೆ ಮಾಡುವುದು ನಾಚಿಕೆಗೇಡಿನ ವಿಷಯ. ಪಹಲ್ ಗಾಮ್ ಅನ್ನುವ ಅತ್ಯಂತ ಸುಂದರವಾದ ಸೂಕ್ಷ್ಮ ಪ್ರದೇಶಕ್ಕೆ ದಿನನಿತ್ಯ ಸಾವಿರಾರು ಯಾತ್ರಿಗಳು ಬರುತ್ತಿದ್ದರೂ, ಯಾವುದೇ ರಕ್ಷಣೆ ಇಲ್ಲ ಅನ್ನುವುದು ನಾಚಿಕೆಗೇಡಿನ ಪ್ರಸಂಗ. ಅತ್ಯಂತ ಸೂಕ್ಷ್ಮ ಪ್ರದೇಶವಾದ ಕಾಶ್ಮೀರದಲ್ಲಿ ಇರುವ ಲಕ್ಷಾಂತರ ರಕ್ಷಣಾ ಪಡೆ ಗುಪ್ತಚರಪಡೆಗಳು ಎಲ್ಲಿ ಹೋಗಿತ್ತು , ಕೇಂದ್ರಾಡಳಿತದ ಉಸ್ತುವಾರಿ ವಹಿಸಿದ್ದ ಗವರ್ನರ್ ರವರು ಏನು ಮಾಡುತ್ತಿದ್ದರು ಅನ್ನುವ ಪ್ರಶ್ನೆ ಎದ್ದಿದೆ. ದೇಶಕ್ಕೆ ಚುನಾವಣೆಗಿಂತ ಮುಖ್ಯ ಪ್ರಜೆಗಳ ಪ್ರಾಣ ರಕ್ಷಣೆ ಅನ್ನುವುದನ್ನು ಈಗಲಾದರೂ ಅಧಿಕಾರದಲ್ಲಿರುವ ಎಲ್ಲರೂ ಗಮನಹರಿಸಬೇಕು. ಹಿಂದೂ ಮುಸ್ಲಿಂ ಅಂತ ಬೊಬ್ಬೆ ಹೊಡೆಯುವ ಮೀಡಿಯಾಗಳು ಸತ್ತ 28 ಜನರ ಪೈಕಿ 15 ಜನರು ಮುಸ್ಲಿಂ ಬಂಧುಗಳು ಅನ್ನೋದನ್ನು ನೆನಪಿಡಬೇಕು. ಎಷ್ಟೋ ಜನರ ಬಲಿದಾನವಾದ ಮೇಲೆ, ದೇಶಕ್ಕೆ ಆತ್ಮಗಾಥ ನೀಡಿದವರನ್ನು ಸುಮ್ಮನೆ ಬಿಡುವುದಿಲ್ಲ ಉಗ್ರರನ್ನು ಸಭೆ ಬಡಿಯುವೆವು ಅನ್ನುವ ವೀರಾ ವೇಷದ ಅಗತ್ಯ ಇದೆಯೇ, prevention is better than cure ಏನಾದರೂ ಕಠಿಣ ಕ್ರಮ ತೆಗೆದುಕೊಳ್ಳುವುದಿದ್ದರೆ ಮಾಡಿ ತೋರಿಸಿ. ಪ್ರತೀ ದಾಳಿಗಳ ಹಿಂದೆ ಅನುಮಾನದ ಹುತ್ತ ಖಂಡಿತ ಇದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts

ಬರೆಂಗಾಯ ಶ್ರೀ ವನದುರ್ಗಾ ಮಾತೃ ಮಂಡಳಿ ವತಿಯಿಂದ ವರಮಹಾಲಕ್ಷ್ಮಿ ಪೂಜೆ

Suddi Udaya

ಉಜಿರೆ ಗ್ರಾ.ಪಂ. ತ್ರೈಮಾಸಿಕ ಕೆ.ಡಿ.ಪಿ ಸಭೆ

Suddi Udaya

ಜೇಸಿಐ ಕೊಕ್ಕಡ ಕಪಿಲಾ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಚಿಬಿದ್ರೆ: ಶತಾಯುಷಿ ಸೇಸು ನಿಧನ

Suddi Udaya

ಪುರುಷರ ನೆಟ್ ಬಾಲ್ ಚಾಂಪಿಯನ್ ಶಿಪ್ ಪಂದ್ಯಾಟ: ಮಂಗಳೂರು ವಿಶ್ವವಿದ್ಯಾನಿಲಯ ತಂಡ ಚಾಂಪಿಯನ್

Suddi Udaya

ಕಳೆಂಜ ಸಂಘಪರಿವಾರದ ಕಾರ್ಯಕರ್ತರಿಂದ ಮನೆ ನಿರ್ಮಾಣ

Suddi Udaya
error: Content is protected !!