ಉಜಿರೆ: 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶ್ರೀ ಧ.ಮಂ.ಪ.ಪೂ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಕು. ಅನನ್ಯ ಮರುಮೌಲ್ಯಮಾಪನಲ್ಲಿ 591 ಅಂಕಗಳನ್ನು ಗಳಿಸಿ ರಾಜ್ಯಕ್ಕೆ 9ನೇ ರ‍್ಯಾಂಕ್ ಗಳಿಸಿರುತ್ತಾರೆ.
ಈ ವಿದ್ಯಾರ್ಥಿನಿಗೆ ಮೊದಲು ವ್ಯವಹಾರ ಅಧ್ಯಯನ ವಿಷಯದಲ್ಲಿ 96 ಅಂಕಗಳು ಬಂದಿದ್ದು ಒಟ್ಟು 588 ಅಂಕಗಳು ಲಭಿಸಿತ್ತು, ಮರು ಮೌಲ್ಯ ಮಾಪನದಲ್ಲಿ 99 ಅಂಕಗಳನ್ನು ಗಳಿಸಿ ಒಟ್ಟು 591 ಅಂಕಗಳನ್ನು ಗಳಿಸಿರುತ್ತಾರೆೆ.
ಇವರನ್ನು ಆಡಳಿತ ಮಂಡಳಿ, ಪ್ರಾಂಶುಪಾಲರಾದ ಪ್ರಮೋದ್ ಕುಮಾರ್ ಬಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿರುತ್ತಾರೆ.