April 26, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹತ್ಯಡ್ಕ: ನವೋದಯ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ಸಮವಸ್ತ್ರ ವಿತರಣೆ

ಹತ್ಯಡ್ಕ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನವೋದಯ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ಬರ್ಗುಳ ರವರು ಸಮವಸ್ತ್ರವನ್ನು ಎ.25ರಂದು ವಿತರಿಸಿದರು.

ಈ ಸಂದರ್ಭದಲ್ಲಿ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಚಂದ್ರ ರಾವ್, ಸಂಘದ ಉಪಾಧ್ಯಕ್ಷ ರಾಜು ಸಾಲಿಯಾನ್, ಸದಸ್ಯರಾದ ಧರ್ಮರಾಜ್ ಗೌಡ ಅಡ್ಡಾಡಿ, ಕೊರಗಪ್ಪ ಗೌಡ ಶಿಶಿಲ, ಬೇಬಿ ಕಿರಣ್, ವರದಶಂಕರ್ ದಾಮ್ಮೆ, ಕೃಷ್ಣಪ್ಪ ಗೌಡ, ನಾಗೇಶ್ ಜಿ., ಗಂಗಾವತಿ, ಬೇಬಿ, ನವೋದಯ ಸಂಘದ ಜಿಲ್ಲಾ ಮೇಲ್ವಿಚಾರಕ ರಂಜಿತ್ ಕುಮಾರ್, ತಾಲೂಕು ಮೇಲ್ವಿಚಾರಕ ಸ್ಟಾನಿ ಪಿಂಟೋ ಉಪಸ್ಥಿತರಿದ್ದರು.

ಹತ್ಯಡ್ಕ ನವೋದಯ ಸ್ವಸಹಾಯ ಸಂಘದ ಪ್ರೇರಕರಾದ ಅಭಿಜಿತ್ ಸಹಕರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಚಂದ್ರ ರಾವ್ ಅತಿಥಿಗಳನ್ನು ಸ್ವಾಗತಿಸಿ, ಧನ್ಯವಾದವಿತ್ತರು.

Related posts

ಧರ್ಮಸ್ಥಳ: ಪೊಸೊಳಿಕೆ ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ ಆಚರಣೆ

Suddi Udaya

ಧರ್ಮಸ್ಥಳ ಮೇಳದ ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಹೃದಯಾಘಾತದಿಂದ ನಿಧನ

Suddi Udaya

ಸೌತಡ್ಕ ದೇವಳದ ಆವರಣದಲ್ಲಿ ಗಿಡ ನಾಟಿ ಕಾರ್ಯಕ್ರಮ

Suddi Udaya

ಬೆನಕ ಆಸ್ಪತ್ರೆಯಲ್ಲಿ ನೂತನ ಆವಿಷ್ಕಾರದ ಕ್ಷ-ಕಿರಣ ಯಂತ್ರ ಉದ್ಘಾಟನೆ

Suddi Udaya

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲಕ್ಕೆ ಪಂಚಕಲ್ಯಾಣಗೊಂಡ 24 ತೀರ್ಥಂಕರರ ಜಿನ ಬಿಂಬಗಳಿಗೆ ಅಭಿಷೇಕ

Suddi Udaya

ಚಾರ್ಮಾಡಿ ಘಾಟಿನಲ್ಲಿ ಭಾರಿ ಬೆಂಕಿ ಅವಘಡ

Suddi Udaya
error: Content is protected !!