ಬೆಳ್ತಂಗಡಿ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಡಿಕೆಎಂಯುಎಲ್) ಆಡಳಿತ ಮಂಡಳಿಗೆ ಏ.೨೬ರಂದು ಚುನಾವಣೆ ನಡೆಯಿತು. ಒಟ್ಟು. ೧೬ ನಿರ್ದೇಶಕ ಸ್ಥಾನಗಳಿಗೆ ೪೧ ಮಂದಿ ಅಂತಿಮ ಕಣದಲ್ಲಿದ್ದರು. ಬೆಳ್ತಂಗಡಿ ಸಹಕಾರ ಭಾರತಿ ಅಭ್ಯರ್ಥಿ ಹೆಚ್ ಪ್ರಭಾಕರ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಪುತ್ತೂರು ವಿಭಾಗ ೨೧೮ ಮತದಾರಿದ್ದು ಕೆ.ಚಂದ್ರಶೇಖರ ರಾವ್, ಜಗನ್ನಾಥ ಶೆಟ್ಟಿ, ಎಸ್ ಬಿ.ಜಯರಾಮ ರೈ, ಎಚ್.ಪ್ರಭಾಕರ, ಭರತ್ ಎನ್.. ಪಿ.ರಮೇಶ್ ಪೂಜಾರಿ, ರಾಮಕೃಷ್ಣ ಡಿ. ಸ್ಪರ್ಧಿಸುತ್ತಿದ್ದಾರೆ. ಬೆಳ್ತಂಗಡಿ ತಾಲೂಕಿನಿಂದ ಆರಂಬೋಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಹೆಚ್ ಪ್ರಭಕಾರ್ ಹಾಗೂ ಗೂಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪಿ. ರಮೇಶ್ ಪೂಜಾರಿ ಮಧ್ಯೆ ಹಣಾಹಣಿ ನಡೆಯಿತು.