September 6, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್.ಐ.ಆರ್ ಮಾಹಿತಿಗಾಗಿ ನೇಮಿಸಲ್ಪಟ್ಟ ಬೂತ್ ಮಟ್ಟದ ಅಧಿಕಾರಿಗಳ ವಿಳಂಬ ನೀತಿಯ ಬಗ್ಗೆ ಬೆಳ್ತಂಗಡಿ ಎಸ್‌ಡಿಪಿಐ ಯಿಂದ ತಹಸೀಲ್ದಾರ್ ದೂರು

ಬೆಳ್ತಂಗಡಿ : ವಿಶೇಷ ತೀವ್ರ ಪರಿಷ್ಕರಣೆ (SIR) ಮಾಹಿತಿಗಾಗಿ ನೇಮಿಸಲ್ಪಟ್ಟ ಬೂತ್ ಮಟ್ಟದ ಅಧಿಕಾರಿಗಳ (BLO) ವಿಳಂಬ ನೀತಿಯ ಬಗ್ಗೆ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಗೆ ಎಸ್‌ಡಿಪಿಐ ನಿಯೋಗ ದೂರು ನೀಡಿತು.

ಚುನಾವಣಾ ಆಯೋಗ ತಂದಂತಹ (SIR) Special Intensive Revision -(ವಿಶೇಷ ತೀವ್ರ ಪರಿಷ್ಕರಣೆ) ವಿಚಾರದಲ್ಲಿ ತಾವುಗಳು ನೇಮಿಸಲ್ಪಟ್ಟ (BLO) ಬೂತ್ ಮಟ್ಟದ ಅಧಿಕಾರಿಗಳ ಮಾಹಿತಿ ಕೊರತೆಯಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ತಾವುಗಳು ಈ ಕೂಡಲೆ ಮಧ್ಯ ಪ್ರವೇಶಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಬೇಕಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಕೋಶಾಧಿಕಾರಿ ಸ್ವಾಲಿ ಮದ್ದಡ್ಕ, ನಗರ ಸಮಿತಿ ಅಧ್ಯಕ್ಷ ರಿಯಾಝ್ ಬೆಳ್ತಂಗಡಿ, ಕ್ಷೇತ್ರ ಸಮಿತಿ ಸದಸ್ಯರಾದ ಅಶ್ರಫ್ ಕಟ್ಟೆ, ಶುಕುರ್ ಕುಪ್ಪೆಟ್ಟಿ ಹಾಗೂ ಇಸ್ಮಾಯಿಲ್ ಸಂಜಯನಗರ ಉಪಸ್ಥಿತರಿದ್ದರು.

Related posts

ಪುದುವೆಟ್ಟು ಶಾಲೆಯಲ್ಲಿ ವಿಜ್ಞಾನ ಮಾದರಿಗಳ ತಯಾರಿಕಾ ಕಾರ್ಯಗಾರ

Suddi Udaya

ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ವರದಿ ಸಾಲಿನಲ್ಲಿ ರೂ 137.95 ಕೋಟಿ ವ್ಯವಹಾರ, ರೂ. 53.26 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ ಶೇ 9.50 ಡಿವಿಡೆಂಟ್

Suddi Udaya

ಅರಸಿನಮಕ್ಕಿ ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

Suddi Udaya

ಆ.18: ದೇಶವ್ಯಾಪಿ ಕಾರ್ಮಿಕ ಪ್ರತಿಭಟನೆ: ಬೆಳ್ತಂಗಡಿ ತಾಲೂಕಿನ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು: ಅನಿಲ್ ಕುಮಾರ್ ಯು

Suddi Udaya

ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಎ.22-ಮೇ.20: ಮುಳಿಯ ಮಳಿಗೆಗಳಲ್ಲಿ ‘ಮುಳಿಯ ಚಿನ್ನೋತ್ಸವ ಸಂಭ್ರಮ’ ಗ್ರಾಹಕರ ನೆಚ್ಚಿನ ಚಿನ್ನಾಭರಣಗಳನ್ನು ಆಕರ್ಷಕ ಬೆಲೆಗೆ ಖರೀದಿಸಲು ಸುವರ್ಣವಕಾಶ

Suddi Udaya
error: Content is protected !!