ಉಜಿರೆ: ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನ ಗ್ರಂಥಾಲಯದಲ್ಲಿ ವಿಶ್ವ-ಭೂಮಿ ದಿನ ಹಾಗೂ ವಿಶ್ವ-ಪುಸ್ತಕ ದಿನದ ಅಂಗವಾಗಿ ಸಂಬಂಧಿಸಿದ ಪುಸ್ತಕ ಮತ್ತು ಲೇಖನಗಳನ್ನು ಅಧ್ಯಯನಕ್ಕಾಗಿ ಪ್ರದರ್ಶನದಲ್ಲಿ ಜೋಡಿಸಲಾಗಿತ್ತು.
ಕಾಲೇಜಿನ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರದರ್ಶನಕ್ಕೆ ಭೇಟಿ ನೀಡಿ ಸದುಪಯೋಗ ಪಡೆದುಕೊಂಡರು. ಗ್ರಂಥಪಾಲಕಿ ಡಾ.ರಜತಾ ಪುಸ್ತಕ ಪ್ರದರ್ಶನವನ್ನು ಸಂಯೋಜಿಸಿದ್ದರು.