April 29, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಳಿಯ: ಬೊಳ್ಳುಕಲ್ಲು ಶ್ರೀ ದುರ್ಗಾ ಭಜನಾ ಮಂಡಳಿ 6ನೇ ವಷ೯ದ ವಾರ್ಷಿಕೋತ್ಸವ

ಕಳಿಯ : ಇಲ್ಲಿಯ ಹನುಮಾನ್ ನಗರ ಬೊಳ್ಳುಕಲ್ಲು ಶ್ರೀ ದುರ್ಗಾ ಭಜನಾ ಮಂಡಳಿಯ 6ನೇ ವರ್ಷದ ವಾರ್ಷಿಕೋತ್ಸವ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಎ.27 ರಂದು ನಡೆಯಿತು.
ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ನೆಲ್ಲಿಕಟ್ಟೆ, ರಕ್ತೇಶ್ವರಿಪದವು ಶ್ರೀ ಮಂಜುನಾಥೇಶ್ವರ ಭಜನ ಮಂಡಳಿ, ನಾಳ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ವತಿಯಿಂದ ಭಜನಾ ಸೇವೆ ಹಾಗೂ ಮಧ್ಯಾಹ್ನ ಮಹಾ ಪೂಜೆ ಜರುಗಿತು.
ಭಜನಾ ಮಂಡಳಿ ಅಧ್ಯಕ್ಷ ದಿನೇಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಲೋಹಿತಾಶ್ವ ಗೌಡ ವಾರ್ಷಿಕ ವರದಿ ಮಂಡಿಸಿದರು.


ಬೆಳ್ತಂಗಡಿ ಮೇಲಂತಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜು ಸಹಾಯಕ ಪ್ರಾಚಾರ್ಯರಾದ ಡಾ.ರವಿ ಎಂ.ಎನ್.ಮಂಡ್ಯ ಧಾರ್ಮಿಕ ಉಪನ್ಯಾಸ ನೀಡಿದರು.
ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಂ., ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಬಿ.ಭಜನಾ ಮಂಡಳಿ ಗೌರವಾಧ್ಯಕ್ಷ ಚೆನ್ನಪ್ಪ ಗೌಡ ಹೀರ್ಯ,ಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ತುಕರಾಮ ಪೂಜಾರಿ ,ವಾಯುಸೇನೆ ಸೈನಿಕ ಪ್ರಮೋದ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಂಬಳದಡ್ಡ ದಿ.ರಮಾನಂದ ಪೂಜಾರಿ ಮತ್ತು ದಿ.ಸೀತಮ್ಮ, ಸ್ಮರಣಾರ್ಥ ಮರದ ದೇವರ ದೀಪದ ಮಂಟಪವನ್ನು ಮಕ್ಕಳು‌ ಭಜನಾ ಮಂಡಳಿಗೆ ಕೊಡುಗೆಯಾಗಿ ನೀಡಿದರು.
‍ಭಜನಾ ಮಂಡಳಿ ಉಪಾಧ್ಯಕ್ಷ ಯಶೋಧರ ಗೌಡ, ಕೋಶಾಧಿಕಾರಿ ದೀಕ್ಷಿತ್, ಸಂಚಾಲಕ ಯೋಗೀಶ್ ಗೌಡ, ಸದಸ್ಯರು ಹಾಗೂ ಭಕ್ತರು ಮತ್ತಿತರರಿದ್ದರು.
ಡಾಕಯ್ಯ ಗೌಡ ಹೀರ್ಯ ನಿರೂಪಿಸಿ, ಮಂಡಳಿ ಅರ್ಚಕ ಜಗದೀಶ್ ಗೌಡ ವಂದಿಸಿದರು.

Related posts

ಕಲ್ಮಂಜ : ಕೊಳಂಬೆಯಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆ: ಅಪಾರ ಕೃಷಿ ನಾಶ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ದೀಪ ಪ್ರದಾನ ಕಾರ್ಯಕ್ರಮ

Suddi Udaya

ಕಾಂಗ್ರೆಸ್ ನ ಸಕ್ರೀಯ ಕಾರ್ಯಕರ್ತೆ ಸಾವಿತ್ರಿ ಬಿಜೆಪಿ ಸೇರ್ಪಡೆ

Suddi Udaya

ಕುಂಟಾಲಪಲ್ಕೆ‌ ಶಾಲೆಗೆ ನೂತನ ಧ್ವಜಸ್ತಂಭ ಕೊಡುಗೆ

Suddi Udaya

ಕಳಿಯ ಗ್ರಾ.ಪಂ. ನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Suddi Udaya

ಕಳೆಂಜ ಗ್ರಾಮ ಪಂಚಾಯತ್ ನ ಗ್ರಾಮ ಸಭೆ

Suddi Udaya
error: Content is protected !!