September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸಭಾಂಗಣದ ಉದ್ಘಾಟನೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸಭಾಂಗಣದ ಉದ್ಘಾಟನಾ ಸಮಾರಂಭವು ಎ.28 ರಂದು ಐ.ಬಿ ರಸ್ತೆಯಲ್ಲಿರುವ ಮಹಿಳಾ ಮಂಡಲಗಳ ಒಕ್ಕೂಟದಲ್ಲಿ ನಡೆಯಿತು. ಶಾಸಕ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿದರು.

ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸಭಾಂಗಣ ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷೆ ಸವಿತಾ ಜಯದೇವ ಅಧ್ಯಕ್ಷತೆ ವಹಿಸಿದ್ದರು. ಪ.ಪಂ.ಅಧ್ಯಕ್ಷ ಜಯಾನಂದ ಗೌಡ, ಉದ್ಯಮಿ ಕಿರಣ್‌ಚಂದ್ರ ಪುಷ್ಪಗಿರಿ ಹಾಗೂ ದ.ಕ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಕಾರ್ಯಕ್ರಮಗಳ ಸಂಯೋಜಕಿ ಕಾರ್ಯದರ್ಶಿ ಅಶ್ವಿನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ನಿವೃತ್ತ ಆರೋಗ್ಯಾಧಿಕಾರಿ ಭಾರತಿ ಪಿ.ವಿ. ಅವರನ್ನು ಸನ್ಮಾನಿಸಲಾಯಿತು. ವಕೀಲರಾದ ಮನೋಹರ ಕುಮಾರ್ ಇಳಂತಿಲ ಹಾಗೂ ಅನಿಲ್ ಕುಮಾರ್ , ಉಪಾಧ್ಯಕ್ಷೆ ಉಮಾ ಆರ್.ರಾವ್, ಜತೆ ಕಾರ್ಯದರ್ಶಿ ವಿನೋದಿನಿ ರಾಮಪ್ಪ, ಕೋಶಾಧಿಕಾರಿ ಉಷಾ ಲಕ್ಷ್ಮಣ ಗೌಡ ಹಾಗೂ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

ಯಶೋಧಾ, ಗಾಯತ್ರಿ ಹಾಗೂ ಶ್ವೇತಾ ಪ್ರಾರ್ಥಿಸಿದರು.ಸಂಚಾಲಕಿ ಲೋಕೇಶ್ವರಿ ವಿನಯಚ್ಚಂದ್ರ ಮಹಿಳಾ ಮಂಡಲದ ಪಕ್ಷಿ ನೋಟ ವಿವರಿಸಿದರು.
ಗೌರವಾಧ್ಯಕ್ಷೆ ಶಾಂತ ಬಂಗೇರ ಸ್ವಾಗತಿಸಿ, ಕಾರ್ಯದರ್ಶಿ ಆಶಾ ಸತೀಶ್ ವಂದಿಸಿ, ಹೇಮಾವತಿ ಕೆ ಬೆಳ್ತಂಗಡಿ ನಿರೂಪಿಸಿದರು.

Related posts

ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆ: ವಿದ್ಯಾರ್ಥಿ ಮಂತ್ರಿಮಂಡಲ ರಚನೆ

Suddi Udaya

ಜಿಲ್ಲಾಮಟ್ಟದ ಐಟಿ ಕ್ವಿಜ್‌ ಸ್ಪರ್ಧೆ: ಉಜಿರೆಯ ಎಸ್‌.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ: ತಾಲೂಕು ಬ್ಯೂಟಿಪಾರ್ಲರ್ ಅಸೋಶಿಯೇಶನ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಹೈಡ್ರಾ ಫೇಶಿಯಲ್ ಸೆಮಿನಾರ್

Suddi Udaya

ಕಳೆಂಜ: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ಕಚೇರಿಗೆ ಆಗಮಿಸಿದ ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ

Suddi Udaya

ಕೊಕ್ಕಡ: ಉಪ್ಪಾರಪಳಿಕೆ ಶಾಲಾ ವಾರ್ಷಿಕೋತ್ಸವ ಮತ್ತು ನೂತನ ಕೊಠಡಿಗಳ ಉದ್ಘಾಟನೆ

Suddi Udaya
error: Content is protected !!