
ಗುರುವಾಯನಕೆರೆ : ಇಲ್ಲಿಯ ಬಸ್ ನಿಲ್ದಾಣ ಬಳಿಯ ನಿವಾಸಿ ಸುದ್ದಿ ಉದಯ ಪತ್ರಿಕೆಯ ಪ್ರತಿನಿಧಿ ಹರಿಯಪ್ಪ ಮೂಲ್ಯ ಅವರ ಮನೆಯ ಎದುರಿನ ಎರಡು ತೆಂಗಿನ ಮರಗಳಿಗೆ ಇಂದು ಸಂಜೆ ಸಿಡಿಲು ಬಡಿದ ಘಟನೆ ನಡೆದಿದೆ.

ಇಂದು ಸಂಜೆ ಬೆಳ್ತಂಗಡಿ, ಗುರುವಾಯನಕೆರೆ ಪ್ರದೇಶದಲ್ಲಿ
ಭೀಕರವಾಗಿ ಸಿಡಿಲು ಮಳೆ ಬಂದಿದ್ದು, ಗುರುವಾಯನಕೆರೆ ಹರಿಯಪ್ಪ ಮೂಲ್ಯ ಅವರ ಮನೆಯ ಎದುರಿನ ಎರಡು ತೆಂಗಿನ ಮರಗಳಿಗೆ ಸಿಡಿಲು

ಬಡಿದು ಮರದಲ್ಲಿ ಬೆಂಕಿ ಕಾಣಿಸಿಕೊಂಡು ತೆಂಗಿನ ಮರ ಹೊತ್ತಿ ಉರಿದಿದೆ. ಸಿಡಿಲು ಬಡಿದಾಗ ಮನೆಯಲ್ಲಿ ಹರಿಯಪ್ಪ ಅವರ ಮಕ್ಕಳು ಇದ್ದರು. ಮನೆಯ ವಿದ್ಯುತ್ ಸಂಪರ್ಕಕ್ಕೆ ಹಾನಿಯಾಗಿದೆ.

