ಲಾಯಿಲ: ಎ.30 ರಂದು ಸುರಿದ ಭಾರಿ ಗಾಳಿ ಮಳೆಯಿಂದಾಗಿ ಲಾಯಿಲ ಗ್ರಾಮದ ಸಂಗಾತಿನಗರ ಎಂಬಲ್ಲಿ ಬೃಹದಾಕಾರದ ಮೂರು ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದು ಅಪಾರ ಹಾನಿಯಾಗುದರ ಜೊತೆಗೆ ರಸ್ತೆಗೆ ಅಡ್ದಲಾಗಿ ಬಿದ್ದ ಘಟನೆ ನಡೆದಿದೆ.

ವಿಷಯ ತಿಳಿದ ಕೂಡಲೆ ಗ್ರಾಮ ಪಂಚಾಯಿತಿ ಸದಸ್ಯರಾದ ಅರವಿಂದ್ ಹಾಗೂ ಗಣೇಶ್ ಇವರು ತಕ್ಷಣ ಸ್ಪಂದಿಸಿ ಮೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಸಂಪರ್ಕಿಸಿ ಕೂಡಲೇ ಪಂಚಾಯತ್ ಮುಖಾಂತರ ಮರ ಕಟ್ಟಿಂಗ್ ಮಾಡುವವರನ್ನು ತರಿಸಿ ರಸ್ತೆಗೆ ಅಡ್ಡಲಾಗಿ ಬಿದ್ದಿದ ಮರವನ್ನು ತೆರವುಗೊಳಿಸಿದ್ದಾರೆ. ತಕ್ಷಣ ಸ್ಪಂದಿಸಿದ ಇವರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ತೆರವು ಕಾರ್ಯದಲ್ಲಿ ನಿವೃತ್ತ ಸೈನಿಕರಾದ ಉಮೇಶ್, ವರದಿಗಾರರಾದ ಉದಯ ಲಾಯಿಲ, ಉದ್ಯಮಿಗಳಾದ ಅಶೋಕ್ ಶೆಟ್ಟಿ ಅರುಣ್, ಜೋಶಿಲ್ ಹಾಗೂ ಇನ್ನಿತರರು ಸಹಕರಿಸಿದ್ದಾರೆ.