25.2 C
ಪುತ್ತೂರು, ಬೆಳ್ತಂಗಡಿ
May 8, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಭಟ್ಕಳ ತಲಗೋಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಗರ್ಭಗುಡಿಗೆ ಕನ್ಯಾಡಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಶಿಲಾನ್ಯಾಸ

ಬೆಳ್ತಂಗಡಿ: ನಾವೆಲ್ಲ ಸುಖವನ್ನು, ಶಾಂತಿಯನ್ನು ಪಡೆಯಬೇಕಾದರೆ ಧರ್ಮವನ್ನು ಅನುಸರಿಸಬೇಕಾಗುತ್ತದೆ. ಸುಖಸ್ಯಂ ಮೂಲಂ ಧರ್ಮ ಎಂಬಂತೆ ಹಿಂದೆ ರುಷಿ ಮುನಿಗಳು ಸಮಾಜದಲ್ಲಿ ಎಲ್ಲರೂ ಸುಖ ನೆಮ್ಮದಿ ಕಾಣಬೇಕೆಂದು ಹಲವಾರು ದೇವಾಲಯವನ್ನು ನಿರ್ಮಿಸಿ ಧರ್ಮವನ್ನು ಉಳಿಸುವ ಕಾಯಕ ಮಾಡಿದ್ದಾರೆ. ಈ ಪರಂಪರೆಯನ್ನು ನಾವೆಲ್ಲರೂ ಉಳಿಸಿಕೊಳ್ಳುವ ಪಯತ್ನ ಮಾಡಬೇಕಾಗಿ ಎಂದು ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಮಠಾಧೀಶರು 1008 ಮಹಾ ಮಂಡಲೇಶ್ವರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.

ಅವರು ಭಟ್ಕಳದ ತಲಗೋಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ಗರ್ಭಗುಡಿಯ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು. ನಾವೆಲ್ಲರೂ ಆಧ್ಯಾತ್ಮಿಕತೆ ಧಾರ್ಮಿಕತೆಯನ್ನು ಮೈಗೂಡಿಸಿಕೊಳ್ಳಲು ಸಮಾಜದಲ್ಲಿ ದೇವಾಲಯವನ್ನು ನಿರ್ಮಿಸಬೇಕಾಗಿದೆ. ಭಗವಂತನಲ್ಲಿ ನಾವೆಲ್ಲರೂ ಪೂರ್ತಿ ಶರಣಾದರೆ ದೇವಾಲಯಗಳೂ ತನ್ನಿಂದ ತಾನೆ ನಿರ್ಮಾಣಗೊಳ್ಳುತ್ತದೆ. ಭಕ್ತರಿಂದಲೇ ಭಗವಂತನು ನಿರ್ಮಿಸಿಕೊಳ್ಳುತ್ತಾರೆ. ಅದಕ್ಕೆ ಕಾಲ ಕೂಡಿ ಬರಬೇಕು ಎಂದರು. ಅತಿ ಶೀಘ್ರದಲ್ಲೇ ದೇವಾಲಯ ನಿರ್ಮಾಣ ಆಗಲಿದ್ದು ಇದಕ್ಕೆ ಎಲ್ಲ ಸದ್ಭಕ್ತರು ತಮ್ಮನ್ನು ತಾವು ಈ ಪುಣ್ಯ ಕಾರ್ಯದಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಸ್ವಾಮೀಜಿ ಹೇಳಿದರು.

ಕರ್ನಾಟಕ ಸರಕಾರದ ಮೀನುಗಾರಿಕೆ, ಬಂದರು ಸಚಿವ ಮಂಕಾಳ ಎಸ್. ವೈದ್ಯ ಮಾತನಾಡಿ ಈ ಭಾಗದದಲ್ಲಿ ನಾನು ಹಲವಾರು ಬಾರಿ ಬಂದಿದ್ದೇನೆ. ಇಲ್ಲಿನ ಶಕ್ತಿ ದೇವತೆಯ ಆಶೀರ್ವಾದದಿಂದ ನನಗೆ ರಾಜಕೀಯವಾಗಿ ಏಳಿಗೆ ಕಂಡಿದ್ದೇನೆ. ಈ ದೇವಸ್ಥಾನದ ನಿರ್ಮಾಣ ಅತೀ ಶೀಘ್ರದಲ್ಲಿ ಆಗಲಿದೆ ಎಂದರು. ಮಾಜಿ ಶಾಸಕ ಸುನೀಲ್ ನಾಯ್ಕ ಮಾತನಾಡಿ ಈ ಕ್ಷೇತ್ರದ ದೇವಿಯ ಶಕ್ತಿಯು ಅಪಾರವಾದದ್ದು ಈ ಪುಣ್ಯ. ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕೆಂದು ಈ ಭಾಗದ ಹಿರಿಯರು ಹಲವು ವರ್ಷಗಳ ಹಿಂದೆಯೇ ಚಿಂತನೆ ನಡೆಸಿದ್ದರು. ಅದಕ್ಕೆ ಈಗ ಕಾಲ ಕೂಡಿಬಂದಿದೆ ಎಂದರು. ದೇವಸ್ಥಾನದ ಅಭಿವೃದ್ಧಿ ಸಮಿತಿಯ ಟ್ರಸ್ಟಿ ತಿಮ್ಮಯ್ಯ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕರಿಯಪ್ಪ ನಾಯ್ಕ ವಹಿಸಿದ್ದರು. ವೇದಿಕೆಯಲ್ಲಿ ದೇವಸ್ಥಾನಕ್ಕೆ ಜಾಗ ನೀಡಿದ ಕುಟುಂಬದವರನ್ನು, ಅರ್ಚಕರನ್ನು ಹಾಗೂ ಶಿಲ್ಪಿಗಳನ್ನು ತಾಂಬೂಲ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ಶ್ರೀಗಳಿಗೆ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಪಾದಪೂಜೆ ನೆರವೇರಿಸಲಾಯಿತು. ವಿಠಲ ನಾಯ್ಕ ಸ್ವಾಗತಿಸಿ ಕೆ.ಆರ್.ನಾಯ್ಕ ವಂದಿಸಿದರು

Related posts

ಉಜಿರೆ : ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

Suddi Udaya

ಗುರುವಾಯನಕೆರೆ: ರತ್ನಗಿರಿ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದ ಪುನರ್ ಪ್ರತಿಷ್ಠಾ ಮಹೋತ್ಸವ: ತುಳುನಾಡ ದೈವಾರಾಧಕರ ಮಹಾ ಸಮ್ಮೇಳನ‌ ಪರ್ವ-2024 ಉದ್ಘಾಟನೆ

Suddi Udaya

ವಾಣಿ ಶಿಕ್ಷಣ ಸಂಸ್ಥೆಗಳ ಬಸ್ ಚಾಲಕ ಶಶಿಧರ ಗೌಡ ಪಣಿಕ್ಕಲ್ ಹೃದಯಾಘಾತದಿಂದ ನಿಧನ

Suddi Udaya

ಉಜಿರೆ: ಶ್ರೀ ರಾಧಾ ಸುರಭಿ ಗೋ ಮಂದಿರ,ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಬಂಟ್ವಾಳದಿಂದ ವಿಶ್ವಗುರು ಭಾರತಕ್ಕಾಗಿ ಗೋ ರಥಯಾತ್ರೆ

Suddi Udaya

ಟೆಕ್ಸಾಸ್ ಇನ್ಸ್ಟ್ರುಮೆಂಟ್ ಕಂಪನಿ ವತಿಯಿಂದ ಬೆಳ್ತಂಗಡಿ ಮಾದರಿ ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಹಾಗೂ ಪುಸ್ತಕ ವಿತರಣೆ

Suddi Udaya

ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯ ಮುಂಜಾಗ್ರತಾ ಕ್ರಮವಾಗಿ ಶಾಸಕ ಹರೀಶ್ ಪೂಂಜರಿಂದ ಅಧಿಕಾರಿಗಳ ಸಭೆ

Suddi Udaya
error: Content is protected !!