September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಬೆಳ್ತಂಗಡಿ ಮುಳಿಯದಲ್ಲಿ ‘ಮುಳಿಯ ಚಿನ್ನೋತ್ಸವ’ ವಿಶ್ವ ವಿನೂತನ ಚಿನ್ನಾಭರಣಗಳ ಹಬ್ಬಕ್ಕೆ ಚಾಲನೆ

ಬೆಳ್ತಂಗಡಿ: ಹತ್ತೂರಿನಲ್ಲಿ ಅತ್ಯಂತ ಜನಪ್ರಿಯವಾಗಿರುವ ಪುತ್ತೂರಿನ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ಮತ್ತೆ ಮುಳಿಯ ಚಿನ್ನೋತ್ಸವಕ್ಕೆ ಸಜ್ಜಾಗಿದೆ.

ಈ ಬಾರಿಯ ವೆರೈಟಿ ವಿನ್ಯಾಸದ ಚಿನ್ನಾಭರಣಗಳ ಹಬ್ಬ- ಮುಳಿಯ ಚಿನ್ನೋತ್ಸವಕ್ಕೆ ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷ ವಿದ್ಯಾ ಶ್ರೀನಿವಾಸ್ ಗೌಡ ಚಾಲನೆ ನೀಡಿದರು.

ಮುಖ್ಯ ಅತಿಥಿ ನೆಲೆಯಲ್ಲಿ ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಮುಳಿಯ ಮಾರ್ಕೆಟಿಂಗ್ ಕನ್ಸಲ್ಟೆಂಟ್ ವೇಣು ಶರ್ಮ ಮುಳಿಯ ಸಂಸ್ಥೆಯ ಬಗ್ಗೆ ತಿಳಿಸಿದರು. ಬೆಳ್ತಂಗಡಿ ಮುಳಿಯ ಶಾಖಾ ವ್ಯವಸ್ಥಾಪಕ ಅಶೋಕ್ ಬಂಗೇರ ಉಪಸ್ಥಿತರಿದ್ದರು.

ಮುಳಿಯ ಸಂಸ್ಥೆಯ ಜನಾರ್ಧನ್ ಕಾರ್ಯಕ್ರಮ‌ ನಿರೂಪಿಸಿದರು, ವ್ಯವಸ್ಥಾಪಕ ಅಶೋಕ್ ಡಿ ಬಂಗೇರ ಸ್ವಾಗತಿಸಿದರು. ಉಪ ವ್ಯವಸ್ಥಾಪಕ ಲೋಹಿತ್ ಕುಮಾರ್ ವಂದಿಸಿದರು. ಮುಳಿಯ ಸಂಸ್ಥೆಯ ಸಿಬ್ಬಂದಿ ವರ್ಗದವರು ಸಹಕರಿಸಿದರು.

ವಿಶೇಷವಾಗಿ ಪುತ್ತೂರು ಮತ್ತು ಬೆಳ್ತಂಗಡಿಯಲ್ಲಿರುವ ಮುಳಿಯ ಚಿನ್ನಾಭರಣಗಳ ಮಳಿಗೆಗಳಲ್ಲಿ ಈ ಉತ್ಸವ ಜರುಗುತ್ತಿದೆ.

ಮುಳಿಯ ಜ್ಯುವೆಲ್ಸ್‌ನಲ್ಲಿ ನಿಮ್ಮ ಆಯ್ಕೆಯ ಚಿನ್ನಾಭರಣವನ್ನು ಖರೀದಿಸಿ ಸಂಭ್ರಮಿಸಿ. ಜತೆಗೆ ಪ್ರತಿದಿನ ವಾಕ್ ಇನ್ ಆಗಿ ಬಹುಮಾನ ಗೆಲ್ಲಿರಿ ಎಂದು ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ಮುಳಿಯ ಜ್ಯುವೆಲ್ಸ್ ಪ್ರಕಟಿಸಿದೆ.

ರೂ 1 ಲಕ್ಷಕ್ಕೂ ಅಧಿಕ ಮೌಲ್ಯದ ಖರೀದಿಗೆ ಕರ್ನಾಟಕದ ಕಾಶ್ಮೀರವೆಂದೇ ಖ್ಯಾತಿ ಪಡೆದ ಮಂಜಿನ ನಗರಿ ಮಡಿಕೇರಿಯಲ್ಲಿ ಒಂದು ದಿನ ಉಚಿತ ವಸತಿ ಸಹಿತ ಪ್ರವಾಸದ ಮೋಜನ್ನು ಪಡೆಯಬಹುದು ಎಂದು ಮುಳಿಯ ಜ್ಯುವೆಲ್ಸ್‌ ವಿಶೇಷ ಆಫರ್‌ ನೀಡುತ್ತಿದೆ.

ಮದುವೆ, ಉಪನಯನ, ಗೃಹಪ್ರವೇಶ, ಮಗುವಿನ ನಾಮಕರಣ, ಇತ್ಯಾದಿ ನಿಮ್ಮ ಸಮಾರಂಭಗಳಲ್ಲಿ ನಿಮ್ಮ ಸಂಭ್ರಮವನ್ನು ಹೆಚ್ಚಿಸಲು ಮುಳಿಯ ಜ್ಯುವೆಲ್ಸ್‌ನ ಚಿನ್ನೋತ್ಸವದಲ್ಲಿ ಭಾಗವಹಿಸಿ ಮೆಚ್ಚಿನ ಆಭರಣಗಳನ್ನು ಆಕರ್ಷಕ ಬೆಲೆಗಳಲ್ಲಿ ಖರೀದಿಸಬಹುದಾಗಿದೆ ಎಂದು ತಿಳಿಸಿದರು.

Related posts

ಸೆಂಟ್ ಅಲ್ಫೋನ್ಸ ಪುಣ್ಯಕ್ಷೇತ್ರದ ನಿರ್ಗಮಿತ ಟ್ರಸ್ಟಿಗಳಿಗೆ ಬೀಳ್ಕೊಡುಗೆ

Suddi Udaya

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಹುಟ್ಟು ಹಬ್ಬದ ಸಂಭ್ರಮ: ಭಾರತೀಯ ಜೀವ ವಿಮಾ ನಿಗಮ ದಿಂದ ಡಾ.ಹೆಗ್ಗಡೆಯವರಿಗೆ ಗೌರವಾರ್ಪಣೆ; ಡಾ. ಹೆಗ್ಗಡೆಯವರ ಭಾವಚಿತ್ರವಿರುವ ಅಂಚೆ ಚೀಟಿ ಬಿಡುಗಡೆ

Suddi Udaya

ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ: ಕೊಕ್ರಾಡಿ ಸ.ಪ್ರೌ. ಶಾಲಾ ಶಿಕ್ಷಕಿ ಅಕ್ಕಮ್ಮ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಬಜಿರೆ ಪಿಎಂಶ್ರೀ ಕೆಪಿಎಸ್ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬೆಳ್ತಂಗಡಿ ಅಭಾಸಾಪ ವತಿಯಿಂದ ಉಪನ್ಯಾಸ ಕಾರ್ಯಕ್ರಮ

Suddi Udaya

ಬದನಾಜೆ ಸ. ಉ. ಪ್ರಾ. ಶಾಲಾ ನವೀಕರಣ ಉತ್ಸವ

Suddi Udaya
error: Content is protected !!