ವೇಣೂರು: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವೇಣೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ
ಪರೀಕ್ಷೆಗೆ ಹಾಜರಾದ 230 ವಿದ್ಯಾರ್ಥಿಗಲ್ಲಿ 229 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಶೇ. 99.56 ಫಲಿತಾಂಶ ಲಭಿಸಿದೆ.
ಕು.ಸುಪ್ರಿಯಾ. 621 ಅಂಕ ಗಳಿಸಿ ಶಾಲೆಗೆ ಪ್ರಥಮ , ತಾಲ್ಲೂಕಿಗೆ ತೃತೀಯ, ಮತ್ತು ರಾಜ್ಯಕ್ಕೆ 4 ನೆಯ ಸ್ಥಾನ ಪಡೆದಿರುತ್ತಾರೆ.
54 ವಿದ್ಯಾರ್ಥಿಗಳು ವಿಶೇಷ ಶ್ರೇಣಿ, 164 ವಿದ್ಯಾರ್ಥಿಗಳು ಪ್ರಥಮ ದರ್ಜೆ, 9 ದ್ವಿತೀಯ ದರ್ಜೆ ಮತ್ತು 02 ತೃತೀಯ ದರ್ಜೆ ಪಡೆದುಕೊಂಡಿದ್ದಾರೆ.
ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ , ಶಿಕ್ಷಕ ವೃಂದದವರಿಗೆ , ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶಾಸಕ ಹರೀಶ್ ಪೂಂಜ, ಸಮಿತಿ ಉಪಾಧ್ಯಕ್ಷ ರಾಜೇಶ್ ಪೂಜಾರಿ ಮೂಡುಕೋಡಿ ಅಭಿನಂದನೆ ಸಲ್ಲಿಸಿದರು.