25.7 C
ಪುತ್ತೂರು, ಬೆಳ್ತಂಗಡಿ
September 20, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ಮೇ 7 : ಜ್ಯೋತಿ ಆಸ್ಪತ್ರೆ, ಲಾಯಿಲ– ತುರ್ತು ಮತ್ತು ಅಪಘಾತ ಚಿಕಿತ್ಸಾ ಆರೈಕೆ ಘಟಕ ಉದ್ಘಾಟನೆ

ಬೆಳ್ತಂಗಡಿ:ಜ್ಯೋತಿ ಆಸ್ಪತ್ರೆ, ಲೈಲಾ ಮತ್ತು ಕೆಎಂಸಿ ಆಸ್ಪತ್ರೆ, ಮಂಗಳೂರು ಇದರ ಸಹಯೋಗದೊಂದಿಗೆ, ತುರ್ತು ಮತ್ತು ಅಪಘಾತ ಚಿಕಿತ್ಸಾ ಆರೈಕೆ ಘಟಕದ ಉದ್ಘಾಟನೆಯು ಏ. 7ರಂದು ನಡೆಯಲಿದೆ ಎಂದು ಕೆಎಂಸಿ ಆಸ್ಪತ್ರೆ, ಮಣಿಪಾಲದ ತುರ್ತು ವೈದ್ಯಕೀಯ ವಿಭಾಗದ ಡಾ. ಜೀದು ರಾಧಾಕೃಷ್ಣನ್ ಹೇಳಿದರು.

ಅವರು ಮೇ 5ರಂದು ಬೆಳ್ತಂಗಡಿ ಜ್ಯೋತಿ ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿವಂದನೀಯ ಮಾರ್ ಲಾರೆನ್ಸ್ ಮುಕ್ಕುಯಿ , ಶಾಸಕರಾದ ಹರೀಶ್ ಪೂಂಜ, ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜಾತ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಇದರ ಸ್ಥಾಪಕರಾದ ರಕ್ಷಿತ್ ಶಿವರಾಮ್, ಕೆಎಂಸಿ ಆಸ್ಪತ್ರೆ ಮಂಗಳೂರಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಗೀರ್ ಸಿದ್ಧಿಕಿ, ಡಾ. ಜೀದು ರಾಧಾಕೃಷ್ಣನ್, ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಯ ಅಧಿಕಾರಿ ಶ್ರೀಮತಿ ಪ್ರಿಯಾ ಚಾಕೋ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಪ್ರಸ್ತುತ ಆರಂಭಿಸುತ್ತಿರುವ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯತೆ ಕಂಡು ಬಂದಲ್ಲಿ ರೋಗಿಗಳನ್ನು ಮಂಗಳೂರು ಕೆಎಂಸಿ ಆಸ್ಪತ್ರೆ ಸ್ಥಳಾಂತರಿಸಲಾಗುವುದು ಹಾಗೂ ಅವರಿಗೆ 24 ಗಂಟೆಗಳ ಕಾಲ ತಜ್ಞ ವೈದ್ಯಕೀಯ ತಂಡ ಸಿದ್ಧವಾಗಿರುತ್ತದೆ. ರೋಗಿಗಳು ಇಚ್ಚಿಸಿದ್ದಲ್ಲಿ ಇತರ ಆಸ್ಪತ್ರೆಗಳಿಗೂ ರವಾನಿಸಲು ಅವಕಾಶವಿರುತ್ತದೆ.”

ತುರ್ತು ಮತ್ತು ಅಪಘಾತ ಚಿಕಿತ್ಸಾ ಆರೈಕೆ ಘಟಕವು 2025ರ ಏಪ್ರಿಲ್ 17ರಿಂದ ಪ್ರಾಯೋಗಿಕ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ಕೇಂದ್ರವು 24 ಗಂಟೆಗಳ ತುರ್ತು ಮತ್ತು ಅಪಘಾತ ಚಿಕಿತ್ಸಾ ಆರೈಕೆ ಘಟಕವಾಗಿದ್ದು, ವಾರದ ಎಲ್ಲ ದಿನಗಳಲ್ಲಿಯೂ ಕಾರ್ಯನಿರ್ವಹಿಸಲಿದೆ. ತುರ್ತು ಚಿಕಿತ್ಸಾ ವಿಭಾಗದಲ್ಲಿ ಪರಿಣತಿಯುಳ್ಳ ವೈದ್ಯರು ಇಲ್ಲಿ ಸೇವೆ ಸಲ್ಲಿಸಲಿದ್ದು, ಐದು ಹಾಸಿಗೆಗಳೊಂದಿಗೆ ಆಧುನಿಕ ಸೌಲಭ್ಯಗಳನ್ನು ಹೊಂದಿರುತ್ತದೆ. ಜೊತೆಗೆ, ವೈದ್ಯಕೀಯ ತಂಡದೊಂದಿಗಿನ ICU ಆಂಬ್ಯುಲೆನ್ಸ್ ಸೇವೆಯೂ ಲಭ್ಯವಿರುತ್ತದೆ ಎಂದರು.

ರೋಗಿಯ ಜೀವ ಉಳಿವು ಹಲವು ಬಾರಿ ‘ಗೋಲ್ಡನ್ ಅವರ್’ ಎಂದು ಕರೆಯಲಾಗುವ ಪ್ರಥಮ ಗಂಟೆಯಲ್ಲಿನ ಚಿಕಿತ್ಸೆಯ ಮೇಲೆ ಆಧಾರಿತವಾಗಿರುತ್ತದೆ. ಬೆಳ್ತಂಗಡಿ ಪ್ರದೇಶದಲ್ಲಿ ತುರ್ತು ಚಿಕಿತ್ಸಾ ಸೌಲಭ್ಯಗಳ ಕೊರತೆಯಿಂದ ಅನೇಕ ಜೀವಹಾನಿ ಸಂಭವಿಸುತ್ತಿದೆ. ಇಂತಹ ತುರ್ತು ಸಂದರ್ಭಗಳಲ್ಲಿ ಜನರ ಅಗತ್ಯತೆಗಳಿಗೆ ಶೀಘ್ರವಾಗಿ ಸ್ಪಂದಿಸುವ ಉದ್ದೇಶದೊಂದಿಗೆ ಈ ಘಟಕವನ್ನು ಪ್ರಾರಂಬಿಸಲಾಗುತ್ತಿದೆ ” ಎಂದು ಜ್ಯೋತಿ ಆಸ್ಪತ್ರೆಯ ಆಡಳಿತಾಧಿಕಾರಿಯಾದ ಸಿಸ್ಟೆರ್ ಮೆರಿಟ್ ಹೇಳಿದರು.

ಬೆಳ್ತಂಗಡಿ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸುವಲ್ಲಿ ಈ ಸಹಯೋಗವು ನಿರ್ಣಾಯಕ ಹೆಜ್ಜೆಯಾಗಿದೆ. ಪ್ರದೇಶಗಳಿಗೆ ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಕೆಎಂಸಿ ಆಸ್ಪತ್ರೆಯ ಬದ್ಧತೆಯಲ್ಲಿ ,ಇದು ಒಂದು ಪ್ರಮುಖ ಮೈಲಿಗಲ್ಲು. ಬೆಳ್ತಂಗಡಿ ಜ್ಯೋತಿ ಆಸ್ಪತ್ರೆಯಲ್ಲಿ ನಮ್ಮ ಪರಿಣತಿ ಮತ್ತು ಸಂಪನ್ಮೂಲಗಳನ್ನು ನೀಡುವ ಮೂಲಕ, ನಾವು ಗ್ರಾಮೀಣ ಸಮುದಾಯಗಳಿಗೆ ಪಟ್ಟಣಗಳಿಗೆ ಹೋಲಿಕೆ ಮಾಡುವಾಗ ಹೆಚ್ಚಿನ ಪರಿಣಾಮಕಾರಿ ಚಿಕಿತ್ಸೆ ಪಡೆಯುವ ಅಂತರವನ್ನು ಕಡಿಮೆ ಮಾಡುತ್ತಿದ್ದೇವೆ.” ಎಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದ ಪ್ರಾದೇಶಿಕ ಮುಖ್ಯ ಕಾರ್ಯಾಚರಣಾ ಅಧಿಕಾರಿ ಸಘೀರ್ ಸಿದ್ಧಿಕಿ ಹೇಳಿದರು.

ಪ್ರಸ್ತುತ ಜ್ಯೋತಿ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಬೆಳ್ತಂಗಡಿಯಲ್ಲಿ ಲಭ್ಯವಿರುವ ಏಕೈಕ ಬ್ಲೆಡ್ ಬ್ಯಾಂಕ್ ಆಗಿದ್ದು, ಚಿಕಿತ್ಸೆಗಾಗಿ ಅಗತ್ಯವಿರುವ ರಕ್ತವನ್ನು ತಕ್ಷಣ ಪೂರೈಸುವ ವ್ಯವಸ್ಥೆ ಇದು ಹೊಂದಿರುತ್ತದೆ. ಹಾಗೆಯೇ ಆಸ್ಪತ್ರೆಯ ಪ್ರಯೋಗಾಲಯವು 24 ಗಂಟೆಗಳ ಕಾಲ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಲಭ್ಯವಿರುತ್ತಿದೆ.

ಪತ್ರಿಕಾಗೋಷ್ಠಿಯಲ್ಲಿ ಮೆಡಿಕಲ್ ಸೂಪರಿಂಟೆಂಡೆಂಟ್ ಜ್ಯೋತಿ ಆಸ್ಪತ್ರೆ, ಡಾ. ಸಿಸ್ಟೆರ್ ಆನ್ ಗ್ರೇಸ್, ಪಿ ಆರ್ ಓ ಫಾ.ಸುನೀಲ್, ಕೆ.ಎಂ.ಸಿ ಆಸ್ಪತ್ರೆಯ ಪಿ.ಆರ್.ಓ ರಾಕೇಶ್ ಉಪಸ್ಥಿತರಿದ್ದರು.

Related posts

ಪಿಲಿಗೂಡು ಫ್ರೆಂಡ್ಸ್ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷರಾಗಿ ಸೀತಾರಾಮ, ಕಾರ್ಯದರ್ಶಿಯಾಗಿ ದಿನೇಶ್ ಆಯ್ಕೆ

Suddi Udaya

ಗುರುವಾಯನಕೆರೆ: ಶಕ್ತಿನಗರದಲ್ಲಿ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೇ ಹರಿದ ನೀರು

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಪೋಸ್ಟ್‌ : ಮುಂಬಯಿಯ ಶ್ರೀನಾಥ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲು

Suddi Udaya

ಪಡಂಗಡಿ ಕಾರ್ಯನ ಮುಟ್ಟಿಯವರಿಗೆ ಸಂತೋಷ್ ಕುಮಾರ್ ಜೈನ್ ರವರ ನೇತೃತ್ವದಲ್ಲಿ ದಿನಸಿ ಸಾಮಾಗ್ರಿ ವಿತರಣೆ

Suddi Udaya

ಕರ್ನಾಟಕ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಆಗಿ ಸೂರಜ್ ಬಳಂಜ ಹೆಚ್. ಪೂಜಾರಿ ಆಯ್ಕೆ

Suddi Udaya

ಟ್ಯಾಂಕರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಪುದುವೆಟ್ಟಿನ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು

Suddi Udaya
error: Content is protected !!