ಅಪಘಾತಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಟ್ಯಾಂಕರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಪುದುವೆಟ್ಟಿನ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು

ಬೆಳ್ತಂಗಡಿ: ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿ ಜು.9ರಂದು ಟ್ಯಾಂಕರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಜು.15ರಂದು ಮೃತಪಟ್ಟಿದ್ದಾರೆ.

ಪುದುವೆಟ್ಟು ಗ್ರಾಮದ ಬಾಜಿದಡಿ ನೋಣಯ್ಯ ಪೂಜಾರಿ-ಮೀನಾಕ್ಷಿ ದಂಪತಿ ಪುತ್ರ ಗಣೇಶ್ (೩೯ ವ) ಮೃತಪಟ್ಟವರು. ಟ್ಯಾಂಕರ್ ಚಾಲಕ ಮಹಮ್ಮದ್ ಆಸಿಫ್ ಎಂಬಾತ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದು, ಈ ವೇಳೆ ಬೈಕ್‌ಗೆ ಡಿಕ್ಕಿಯಾಗಿ ಗಣೇಶ್ ರಸ್ತೆಗೆ ಎಸೆಯಲ್ಪಟ್ಟು, ಗಂಭೀರ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ ಪೂರ್ಣಿಮಾ, ತಂದೆ, ತಾಯಿ, ಸಹೋದರ ಯಶೋಧರ, ಸಹೋದರಿ ಪ್ರಮೀಳಾರನ್ನು ಅಗಲಿದ್ದಾರೆ.
ಈ ಬಗ್ಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಪಾಕೃತಿಕ ವಿಕೋಪಗಳ ಬಗ್ಗೆ ಪೂರ್ವ ತಯಾರಿ ಸಭೆ

Suddi Udaya

ಗೆಳೆಯರ ಬಳಗ ಅಕ್ಷಯನಗರ ಸದಸ್ಯರಿಂದ ಶ್ರಮದಾನ

Suddi Udaya

ಸುಲ್ಕೇರಿಮೊಗ್ರು ಹಿ.ಪ್ರಾ. ಶಾಲೆಯ ನೀರಿನ ನಳ್ಳಿಗಳನ್ನು ತುಂಡರಿಸಿದ ಕಿಡಿಗೇಡಿಗಳು

Suddi Udaya

ಬೆಳ್ತಂಗಡಿ-ಉಪ್ಪಿನಂಗಡಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣ: ಕಣ್ಣೂರಿನ ತಂಗಚ್ಚ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರ ಮನವಿ

Suddi Udaya

ಉಜಿರೆ: ಮುಂಡತ್ತೋಡಿ ನಿವಾಸಿ ಸಿ. ಗೋಪಾಲ್ ಕೃಷ್ಣ ಮೆನನ್ ನಿಧನ

Suddi Udaya

ನಾಳ: ಗೋವಿಂದೂರು ಬಳಿ ವಿಎಂ ನರ್ಸರಿ ಉದ್ಘಾಟನೆ

Suddi Udaya
error: Content is protected !!