September 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಮಂಗಳೂರು ವಿ. ವಿ. ಅಂತರ್ ಕಾಲೇಜು ಪುರುಷರ ಕ್ರಿಕೆಟ್: ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಸತತ ಮೂರನೇ ಬಾರಿಗೆ ಚಾಂಪಿಯನ್

ಬೆಳ್ತಂಗಡಿ: ಕೆನರಾ ಕಾಲೇಜು ಮಂಗಳೂರು ಇದರ ಆಶ್ರಯದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ಮೂಲ್ಕಿ ದಯಾನಂದ್ ಕಾಮತ್ ಮೆಮೋರಿಯಲ್ ಟ್ರೋಫಿಗಾಗಿ ನಡೆದ ಮಂಗಳೂರು ವಿ. ವಿ. (ಮಂಗಳೂರು ವಲಯ) ಅಂತರ್ಕಾಲೇಜು ಪುರುಷರ ಕ್ರಿಕೆಟ್ ಪಂದ್ಯಾಕೂಟದಲ್ಲಿ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜು ತಂಡವು ಸತತ ಮೂರನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವುದರೊಂದಿಗೆ ಹ್ಯಾಟ್ರಿಕ್ ಸಾಧನೆ ಮಾಡಿದೆ.

ಎಸ್. ಡಿ. ಎಂ. ಸಿ. ಬಿ. ಎಂ. ವಿರುದ್ಧವಾಗಿ ನಡೆದ ಫೈನಲ್ ಕಾದಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡ ಎಸ್. ಡಿ. ಎಂ. ತಂಡವು 78 ರನ್ನು ಗಳಿಗೆ ಆಲ್ ಔಟ್ ಆಯಿತು. ಸೇಕ್ರೆಡ್ ಹಾರ್ಟಿನ ಶಿವಾoಶು 3 ವಿಕೆಟ್ ಪಡೆದರೆ ಸ್ವಸ್ತಿಕ್, ನಯನ್, ವಿಕಾಸ್ ಮತ್ತು ತುಷಾರ್ ತಲಾ ಒಂದು ವಿಕೆಟ್ ಪಡೆದರು.
79 ರನ್ನು ಗಳ ಗುರಿಪಡೆದ ಸೇಕ್ರೆಡ್ ಹಾರ್ಟ್ ತಂಡವು 10.1 ಓವರುಗಳಲ್ಲಿ 5 ವಿಕೆಟಿಗೆ ಗುರಿಮುಟ್ಟಿತು. ತಂಡದ ಪರವಾಗಿ ನಯನ್ 39 (29) ಹಾಗೂ ನೂತನ್ 28 (18) ರನ್ನುಗಳಿಸಿದರು.


ಸರಣಿಯುದ್ಧಕ್ಕೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಸೇಕ್ರೆಡ್ ಹಾರ್ಟ್ ನ ನಯನ್ ಸರಣಿಯ ಉತ್ತಮ ಬ್ಯಾಟ್ಸಮನ್ ಪ್ರಶಸ್ತಿ ಪಡೆದರು. ಫೈನಲ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಲಳಿಸಿದ ಎಸ್. ಡಿ. ಎಂ. ನ ರೆಹನ್ ಉತ್ತಮ ಬೌಲರ್ ಪ್ರಶಸ್ತಿ ಪಡೆದರೆ. ಫೈನಲ್ ನಲ್ಲಿ 3 ವಿಕೆಟ್ ಕಿತ್ತ ಸೇಕ್ರೆಡ್ ಹಾರ್ಟ್ ಕಾಲೇಜಿನ ಶಿವಾOಶು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Related posts

ಕಾರ್ಕಳ ವಿಧಾನಸಭಾ ಕ್ಷೇತ್ರದ ಪಕ್ಷದ ಉಸ್ತುವಾರಿಯಾಗಿ ರಕ್ಷಿತ್ ಶಿವರಾಂ ನೇಮಕ

Suddi Udaya

ಗೇರುಕಟ್ಟೆ ಜಾರಿಗೆಬೈಲು ನಿವಾಸಿ ಶಕುಂತಳಾ ನಿಧನ

Suddi Udaya

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಸವಣಾಲು ಅ.ಹಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಚುನಾವಣಾ ಪ್ರಭಾರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಬಿಜೆಪಿ ದ.ಕ. ಜಿಲ್ಲೆಯ ಸಾಮಾಜಿಕ ಮಾಧ್ಯಮ ಪ್ರಕೋಷ್ಠ ಜಿಲ್ಲಾ ಸಮಿತಿಗೆ ಸದಸ್ಯರಾಗಿ ಸುಪ್ರೀತ್ ಜೈನ್ ಅಳದಂಗಡಿ

Suddi Udaya
error: Content is protected !!