23 C
ಪುತ್ತೂರು, ಬೆಳ್ತಂಗಡಿ
May 7, 2025
ಆರೋಗ್ಯ

ಗ್ರಾಮ ಪಂಚಾಯತ್ ತಣ್ಣೀರು ಪಂತ ಹಾಗೂ ಅರಿವು ಕೇಂದ್ರದ ಸಹಭಾಗಿತ್ವದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ.

ತಣ್ಣೀರುಪ0ತ ಗ್ರಾಮ ಪಂಚಾಯತ್ ತಣ್ಣೀರು ಪಂತ ಹಾಗೂ ಅರಿವು ಕೇಂದ್ರದ ಸಹಭಾಗಿತ್ವದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು. ಒಂದು ವಾರದ ಕಾಲ ನಡೆಯುವ ಈ ಶಿಬಿರದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಹೇಮಾವತಿ ಹಾಗೂ ಮಕ್ಕಳಿಂದ ದೀಪ ಬೆಳಗಿಸುವುದರ ಮೂಲಕ ಮೇ 6ರಂದು ನೆರವೇರಿಸಲಾಯಿತು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಶ್ರವಣ್ ಕುಮಾರ್ ಇವರು ಅತಿಥಿಗಳನ್ನು ಸ್ವಾಗತಿಸಿ ಶಿಬಿರದ ಉದ್ದೇಶದ ಬಗ್ಗೆ ವಿವರಿಸಿದರು ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಕಾರ್ಯದರ್ಶಿ ಗ್ರಂಥಾಲಯದ ಸಲಹಾ ಸಮಿತಿ ಸದಸ್ಯರು ಪಂಚಾಯತ್ ಸಿಬ್ಬಂದಿ ವರ್ಗ ಪುನರ್ವಸತಿ ಕಾರ್ಯಕರ್ತರು ಮತ್ತು ಎಂಬಿಕೆ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದು ಸಹಕರಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಮೋಹಿನಿ ಇವರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ಪಂಚಾಯತ್ ಕಾರ್ಯದರ್ಶಿಯವರು ಧನ್ಯವಾದ ವಿತ್ತರು. ನಂತರ ಈ ದಿನದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀ ಪ್ರವೀಣ್ ಇವರು ಮಕ್ಕಳಿಗೆ ವಿವಿಧ ಬಗ್ಗೆಯ ಕ್ರಾಫ್ಟ್ ಚಟುವಟಿಕೆಗಳನ್ನು ಹಾಗೂ ವಿವಿಧ ಮನೋರಂಜನ ಆಟಗಳನ್ನು ಹಮ್ಮಿಕೊಂಡಿದ್ದು, ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು. ಈ ಶಿಬಿರವು ಮೇ.12 ರವರೆಗೆ ಜರಗಲಿದೆ.

Related posts

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಗುವಿಗೆ ಲ್ಯಾಪ್ರೋಸ್ಕೋಪಿಕ್ ಅಪೆಂಡಿಸೈಟಿಸ್ ಯಶಸ್ವಿ ಶಸ್ತ್ರಚಿಕಿತ್ಸೆ

Suddi Udaya

ನೆರಿಯ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ಸರೋಜಾ ನಿವೃತ್ತಿ

Suddi Udaya

ನಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ

Suddi Udaya

ಡೆಂಗ್ಯೂ ವಿರೋಧ ಮಾಸಾಚಾರಣೆ ಅಂಗವಾಗಿ ತಾಲೂಕಿನ ಗ್ರಾ.ಪಂ. ಗಳ ಪಿಡಿಒ, ಕಾರ್ಯದರ್ಶಿ ಮತ್ತು ಸಿಬ್ಬಂದಿಗಳಿಗೆ ಮಾಹಿತಿ

Suddi Udaya

ಎಸ್ಸೆಸ್ಸೆಫ್ ಬೆಳ್ತಂಗಡಿ ಸೆಕ್ಟರ್ ವತಿಯಿಂದ ಸಾರ್ವಜನಿಕ ರಕ್ತದಾನ ಶಿಬಿರ

Suddi Udaya

ಮಾನಸಿಕ ಹಾಗೂ ಬುದ್ಧಿಮಾಂದ್ಯ ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆ ಶಿಬಿರ

Suddi Udaya
error: Content is protected !!