ಕಾಶಿಪಟ್ಣ : ಪೆರಾಡಿ-ಶಿರ್ತಾಡಿ ರಸ್ತೆಯಲ್ಲಿ ಬೈಕ್ ಗಳ ನಡುವೆ ಡಿಕ್ಕಿಯಾದ ಘಟನೆ ಮೇ 7ರಂದು ನಡೆದಿದೆ.
ಕಾಶಿಪಟ್ಣ ಪಂಚಾಯತ್ ಬಳಿ ಪೆರಾಡಿ-ಶಿರ್ತಾಡಿ ಸಾರ್ವಜನಿಕ ರಸ್ತೆಯಲ್ಲಿ ಬೈಕ್ ನ್ನು ಅದರ ಸವಾರ ಪ್ರಸಾದ್ ಎಂಬಾತನು ಸುಜಿತ್ ರವರನ್ನು ಸಹ ಸವಾರನ್ನಾಗಿ ಕುಳ್ಳಿರಿಸಿಕೊಂಡು ಪೆರಾಡಿ ಕಡೆಯಿಂದ ಶಿರ್ತಾಡಿ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಶಿರ್ತಾಡಿ ಕಡೆಯಿಂದ ಪೆರಾಡಿ ಕಡೆಗೆ ಹೊಗುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಬೈಕ್ ನವರು ಬೈಕ್ ಗಳೊಂದಿಗೆ ರಸ್ತೆಗೆ ಬಿದ್ದ ಪರಿಣಾಮ ವಾಹನಗಳೆರಡು ಜಖಂಗೊಂಡಿದ್ದು, ಅಪಘಾತದಿಂದ ಶಮಿತ್ ರವರ ಕಾಲಿಗೆ ಮತ್ತು ತಲೆಗೆ ರಕ್ತ ಗಾಯಗಳಾಗಿರುತ್ತದೆ, ಬೈಕ್ ಸವಾರ ಪ್ರಸಾದ್ ರವರಿಗೂ ಗಾಯವಾಗಿದ್ದು ಸಹ ಸವಾರ ಸುಜಿತ್ ರವರ ಮುಖಕ್ಕೆ, ಕೈ, ಕಾಲಿಗೆ ರಕ್ತ ಗಾಯವಾಗಿದ್ದು ಗಾಯಗೊಂಡ ಶಮಿತ್, ಪ್ರಸಾದ್, ಸುಜಿತ್ ರವರು ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದು ಅವರಲ್ಲಿ ಸುಜಿತ್ ರವರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಾಗಿರುವುದಾಗಿದೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.