September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕಾಶಿಪಟ್ಣ: ಬೈಕ್ ಗಳ ನಡುವೆ ಅಪಘಾತ: ಸವಾರರಿಗೆ ಗಾಯ

ಕಾಶಿಪಟ್ಣ : ಪೆರಾಡಿ-ಶಿರ್ತಾಡಿ ರಸ್ತೆಯಲ್ಲಿ ಬೈಕ್ ಗಳ ನಡುವೆ ಡಿಕ್ಕಿಯಾದ ಘಟನೆ ಮೇ 7ರಂದು ನಡೆದಿದೆ.

ಕಾಶಿಪಟ್ಣ ಪಂಚಾಯತ್‌ ಬಳಿ ಪೆರಾಡಿ-ಶಿರ್ತಾಡಿ ಸಾರ್ವಜನಿಕ ರಸ್ತೆಯಲ್ಲಿ ಬೈಕ್ ನ್ನು ಅದರ ಸವಾರ ಪ್ರಸಾದ್ ಎಂಬಾತನು ಸುಜಿತ್‌ ರವರನ್ನು ಸಹ ಸವಾರನ್ನಾಗಿ ಕುಳ್ಳಿರಿಸಿಕೊಂಡು ಪೆರಾಡಿ ಕಡೆಯಿಂದ ಶಿರ್ತಾಡಿ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಶಿರ್ತಾಡಿ ಕಡೆಯಿಂದ ಪೆರಾಡಿ ಕಡೆಗೆ ಹೊಗುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಬೈಕ್ ನವರು ಬೈಕ್‌ ಗಳೊಂದಿಗೆ ರಸ್ತೆಗೆ ಬಿದ್ದ ಪರಿಣಾಮ ವಾಹನಗಳೆರಡು ಜಖಂಗೊಂಡಿದ್ದು, ಅಪಘಾತದಿಂದ ಶಮಿತ್ ರವರ ಕಾಲಿಗೆ ಮತ್ತು ತಲೆಗೆ ರಕ್ತ ಗಾಯಗಳಾಗಿರುತ್ತದೆ, ಬೈಕ್ ಸವಾರ ಪ್ರಸಾದ್ ರವರಿಗೂ ಗಾಯವಾಗಿದ್ದು ಸಹ ಸವಾರ ಸುಜಿತ್‌ ರವರ ಮುಖಕ್ಕೆ, ಕೈ, ಕಾಲಿಗೆ ರಕ್ತ ಗಾಯವಾಗಿದ್ದು ಗಾಯಗೊಂಡ ಶಮಿತ್‌, ಪ್ರಸಾದ್‌, ಸುಜಿತ್ ರವರು ಮೂಡಬಿದ್ರೆಯ ಆಳ್ವಾಸ್‌ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದು ಅವರಲ್ಲಿ ಸುಜಿತ್‌ ರವರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ದೇರಳಕಟ್ಟೆ ಕೆ ಎಸ್‌ ಹೆಗ್ಡೆ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಾಗಿರುವುದಾಗಿದೆ.

ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಬೂಡುಜಾಲು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಸದಸ್ಯರಿಗೆ ಶೇ. 10 ಡಿವಿಡೆಂಟ್

Suddi Udaya

ಎಲ್‌ ಸಿ ಆರ್ ವಿದ್ಯಾಸಂಸ್ಥೆ ಕಕ್ಯಪದವು: ಪದವಿ ವಿಭಾಗದ ಬಿ.ಕಾಂ ನಲ್ಲಿ ವಾಣಿಜ್ಯ ಚಟುವಟಿಕೆ

Suddi Udaya

ಇಂದಬೆಟ್ಟು: ಗಂಗಾಧರ್ ಎಸ್. ರವರ ತೋಟದಲ್ಲಿ ಬೃಹತಾಕಾರದ ಹೆಬ್ಬಾವು ಪತ್ತೆ

Suddi Udaya

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ಜೋಯಲ್ ಮೆಂಡೋನ್ಸ ಆಯ್ಕೆ

Suddi Udaya

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಗೆ ಚಾಲನೆ: ಧ್ವಜಾರೋಹಣ, ಉತ್ಸವ ಬಲಿ, ಭಕ್ತರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya

ಪುದುವೆಟ್ಟು ಶ್ರೀಧ.ಮಂ.ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

Suddi Udaya
error: Content is protected !!