36.8 C
ಪುತ್ತೂರು, ಬೆಳ್ತಂಗಡಿ
May 10, 2025
ಧಾರ್ಮಿಕ

ಆಪರೇಷನ್ ಸಿಂದೂರ್ ಯಶಸ್ವಿ ಕಾರ್ಯಾಚರಣೆ ಭಾರತೀಯ ಸೈನ್ಯ ಹಾಗೂ ಸೈನಿಕರಿಗೆ ಶಕ್ತಿ ತುಂಬಲು ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ‘ಸಾಮೂಹಿಕ ವಿಷ್ಟು ಸಹಸ್ರನಾಮ ಪಠಣ’

ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್ ನಾವೂರು ಇದರ ವತಿಯಿಂದ ಕಳೆದ ಕೆಲವು ದಿನಗಳಿಂದ ಹಿಂದೆ ಪುಹಲ್ಗಾಮ್‌ನಲ್ಲಿ ಭಯೋತ್ಪಾದಕರ ಪೈಚಾಶಿಕ ಕೃತ್ಯಕ್ಕೆ ‘ಆಪರೇಷನ್ ಸಿಂದೂರ್’ ಮೂಲಕ ಪ್ರತ್ಯುತ್ತರ ನೀಡಿ, ದೇಶದ ಗಡಿಯಲ್ಲಿ ಪಾಕ್ತಿಸ್ತಾನದ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಿರುವ ಭಾರತೀಯ ಸೈನ್ಯಕ್ಕೆ ಹಾಗೂ ಸೈನಿಕರಿಗೆ ಶಕ್ತಿ ನೀಡಲು ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ‘ಸಾಮೂಹಿಕ ವಿಷ್ಟು ಸಹಸ್ರನಾಮ ಪಠಣ’ ಹಾಗೂ ವಿಶೇಷ ಪೂಜೆ ಮೇ 10ರಂದು ಜರುಗಿತು.

ಬೆಳಿಗ್ಗೆ 5.15ರಿಂದ 6 ಗಂಟೆಯವರಿಗೆ ನಾವೂರಿನ ವೈದ್ಯರಾದ ಡಾ. ಪ್ರದೀಪ್ ಇವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ವಿಷ್ಟು ಸಹಸ್ರನಾಮ ಪಠಣ ನಡೆಯಿತು. ಬಳಿಕ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದೇಶದ ಗಡಿಯಲ್ಲಿ ಕಾರ್ಯಾರಣೆ ನಡೆಸುತ್ತಿರುವ ಭಾರತ ದೇಶದ ಸೈನ್ಯ ಹಾಗೂ ಸೈನಿಕರಿಗೆ ದೇವರು ಹೆಚ್ಚಿನ ಶಕ್ತಿ ಹಾಗೂ ಮನೋಬಲವನ್ನು ಕರುಣಿಸಲಿ ಎಂದು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಕೆ. ಮೋಹನ್‌ಕುಮಾರ್ ಹಾಗೂ ಎಕ್ಸೆಲ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಭಾಗವಹಿಸಿ, ದೇಶದ ಸೈನಿಕರಿಗೆ ಹಾಗೂ ಸೈನ್ಯಕ್ಕೆ ಶಕ್ತಿ ತುಂಬಲು ನಾವೂರು ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ. ಪ್ರದೀಪ್ ಕುಮಾರ್ ಮಾತನಾಡಿ, ಸೈನಿಕರಿಗೆ ಶಕ್ತಿ ತುಂಬುವ ಕಾರ್ಯ ದೇಶದಾದ್ಯಂತ ನಡೆಯುತ್ತಿದ್ದು, ನಾವೂರಿನಲ್ಲಿಯೂ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಮೂಲಕ ನಡೆದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಹರೀಶ್ ಸಾಲ್ಯಾನ್ ಮೊರ್ತಾಜೆ, ಹರೀಶ್ ಕಾರಿಂಜ, ಗಣೇಶ್ ಗೌಡ, ಶಾಲಾ ಮುಖ್ಯೋಪಾಧ್ಯಾಯರಾದ ರಾಜೇಂದ್ರ, ಕರುಣಾಕರ್ ಬೋಜಾರ, ಶ್ರೀನಾಥ್ ಹಾಗೂ ಟ್ರಸ್ಟ್‌ನ ಪದಾಧಿಕಾರಿಗಳು, ನಾವೂರು ಹಾಗೂ ನಡ ಗ್ರಾಮದ ಭಕ್ತರು ಉಪಸ್ಥಿತರಿದ್ದರು.

Related posts

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ: ದೇವರ ದರ್ಶನ ಬಲಿ, ಪಲ್ಲ ಪೂಜೆ

Suddi Udaya

ಬೆಳಾಲಿನಲ್ಲಿ, ಹದಿನೆಂಟು ದಿನಗಳ ಭಗವದ್ಗೀತೆ ತರಗತಿಯ ಸಮಾರೋಪ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿಯ ಷಷ್ಠಿ ಮಹೋತ್ಸವ: ಸ್ವರ್ಣ ಅಟ್ಟೆ ಪ್ರಭಾವಳಿ ಸಮರ್ಪಣೆ

Suddi Udaya

ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಜಿನಮಂದಿರದಲ್ಲಿ ಆರಾಧನೆ

Suddi Udaya

ನಡ: ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ, ವೈಭವೋಪೇತ ಶೋಭಾಯಾತ್ರೆ , ಧಾರ್ಮಿಕ ಸಭೆ

Suddi Udaya
error: Content is protected !!